ರೈಲ್ವೇ ಟಿಕೇಟ್‌ಗಳಲ್ಲಿ ವ್ಯಕ್ತಿ ಬದಲಾವಣೆ – ಮನವಿ

0

ಪುತ್ತೂರು: ಕಾಯ್ದಿರಿಸಿದ ರೈಲ್ವೇ ಟಿಕೇಟುಗಳಲ್ಲಿ ವ್ಯಕ್ತಿ ಬದಲಾವಣೆ ಶೇಕಡ 30ರಷ್ಟು ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ರೈಲ್ವೇ ಸಚಿವರಿಗೆ ಮತ್ತು ಮಂಗಳೂರು ಸಂಸದರಿಗೆ ಮನವಿ ಸಲ್ಲಿಸಲಾಗಿದೆ.

ಕಾಯ್ದಿರಿಸಿದ ರೈಲ್ವೇ ಟಿಕೇಟ್‌ಗಳಲ್ಲಿ ಈಗಿರುವ ನಿಯಮಗಳ ಪ್ರಕಾರ ಕುಟುಂಬದ ಸದಸ್ಯರ ಟಿಕೇಟ್ ಅಥವಾ ಗುಂಪು ಸದಸ್ಯರ ಟಿಕೇಟ್‌ಗಳಲ್ಲಿ ಪ್ರಯಾಣ ವೇಳೆ ಕಾಯ್ದಿರಿಸಿದ ಟಿಕೇಟ್‌ಗಳಲ್ಲಿರುವ ವ್ಯಕ್ತಿಗಳನ್ನು ಶೇಕಡಾ 10ರಷ್ಟು ಮಾತ್ರ ಬದಲಾಯಿಸಲು ಅವಕಾಶಗಳಿರುತ್ತದೆ. ಇದನ್ನು ಪ್ರಯಾಣದ 24 ಗಂಟೆಗಳ ಮೊದಲು ಆಯಾ ಸ್ಟೇಷನ್ ಮಾಸ್ಟರ್‌ಗಳಲ್ಲಿ ಸೂಕ್ತ ದಾಖಲೆಗಳನ್ನು ಕೊಟ್ಟು ಬದಲಾಯಿಸಬಹುದಾಗಿದೆ. ಆದರೆ ಗುಂಪು ಟಿಕೇಟ್‌ಗಳಲ್ಲಿ ಅಥವಾ ಕುಟುಂಬದ ಸದಸ್ಯರ ಟಿಕೇಟ್‌ಗಳಲ್ಲಿ 10 ಜನರಿಗಿಂತ ಕಡಿಮೆ ಇದ್ದಲ್ಲಿ ಬದಲಾವಣೆಗೆ ಈಗಿರುವ ನಿಯಮಗಳಂತೆ ಅವಕಾಶಗಳಿರುವುದಿಲ್ಲ. ಇದನ್ನು ಶೇಕಡಾ 30ಕ್ಕೆ ಹೆಚ್ಚುಗೊಳಿಸಿದಲ್ಲಿ 5 ಜನರ ಗುಂಪು ಟಿಕೇಟ್‌ಗಳಲ್ಲಿ ಕೂಡ ಅನಿವಾರ್ಯ ಸಂದರ್ಭಗಳಲ್ಲಿ ಒಂದೆರಡು ವ್ಯಕ್ತಿಗಳನ್ನು ಬದಲಾಯಿಸಲು ಪ್ರಯಾಣಿಕರಿಗೆ ಅವಕಾಶಗಳಾಗುತ್ತದೆ. ಇದರಿಂದ ಜನರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಮನವಿಯಲ್ಲಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here