ನೂತನ ಅಧ್ಯಕ್ಷರಾಗಿ ಪುತ್ತೂರಿನ ಸುಂದರ್ರಾಜ್ ರೈ, ಉಮೇಶ್ ರೈ, ಉಮೇಶ್, ಪ್ರದೀಪ್ ಆಯ್ಕೆ
ಪುತ್ತೂರು: 1972ರಲ್ಲಿ ಸ್ಥಾಪನೆಗೊಂಡಿರುವ ಬೆಂಗಳೂರಿನ ತುಳು ಕೂಟದ ನೂತನ ಅಧ್ಯಕ್ಷರಾಗಿ ಪುತ್ತೂರಿನ ಸುಂದರ್ರಾಜ್ ರೈ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ 2ನೇ ಬಾರಿಗೆ ಉಮೇಶ್ ಕುಮಾರ್ ರೈ ಕಡಬ, ಪ್ರದೀಪ್ ಮೆಂಡೋನ್ಸಾ ಮತ್ತು ಉಮೇಶ್ ನಾಯ್ಕ ವಿಟ್ಲ ಆಯ್ಕೆಯಾಗಿದ್ದಾರೆ. 50ನೇ ವರ್ಷದ ಸಂಭ್ರಮದಲ್ಲಿರುವ ಬೆಂಗಳೂರು ತುಳುಕೂಟದ ನೇತೃತ್ವದಲ್ಲಿ ತುಳುನಾಡಿನ ಸಂಸ್ಕೃತಿಗಳ ಉಳಿವು ಮತ್ತು ಬೆಳವಣಿಗೆಗೆ ಅನೇಕ ಕಾರ್ಯಕ್ರಮ ಹಾಗೂ ಹೋರಾಟಗಳನ್ನು ಮಾಡಲಾಗುತ್ತಿದೆ. ಪ್ರತೀ ವರ್ಷ ವಿಶೇಷವಾಗಿ ಪುದ್ವಾರ್ ವನಸ್, ಆಟಿ ಅಮಾವಾಸ್ಯೆ, ಕೆಡ್ಡಸ ಮುಂತಾದ ಆಚರಣೆಗಳನ್ನು ನಡೆಸುತ್ತಿರುವ ತುಳು ಕೂಟ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ. ಈ ತುಳು ಕೂಟದಲ್ಲಿ ಪುತ್ತೂರಿನ ಹಲವರು ಕಾರ್ಯ ನಿರ್ವಹಿಸುತ್ತಿದ್ದು ,ಇದರಲ್ಲಿ ಮೂಲತಃ ಪುತ್ತೂರಿನವರಾಗಿದ್ದು ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸುಂದರ್ರಾಜ್ ರೈ, ಉಮೇಶ್ ಕುಮಾರ್ ರೈ ಕಡಬ, ಪ್ರದೀಪ್ ಮೆಂಡೋನ್ಸಾ ಮತ್ತು ಉಮೇಶ್ ನಾಯ್ಕರವರು ಒಳಗೊಂಡಿದ್ದಾರೆ.
ಅಧ್ಯಕ್ಷ ಸುಂದರ್ ರಾಜ್ ರೈ ಉದ್ಯಮಿಗಳಾಗಿದ್ದು, ಕೆದಂಬಾಡಿ ಗ್ರಾಮದ ಕುಕ್ಕುಂಜೋಡು ನಿವಾಸಿಯಾಗಿದ್ದಾರೆ. ಉಮೇಶ್ ಕುಮಾರ್ ರೈ ಕಡಬ ಅರ್ಪಾಜೆ ನಿವಾಸಿಯಾಗಿದ್ದು ಉದ್ಯಮಿಯಾಗಿದ್ದಾರೆ. ಪ್ರದೀಪ್ ಮೆಂಡೋನ್ಸಾರವರು ಪುತ್ತೂರು ದರ್ಬೆಯವರಾಗಿದ್ದು ಸ್ವ ಉದ್ಯೋಗಿಯಾಗಿರುತ್ತಾರೆ. ಉಮೇಶ್ ನಾಯ್ಕರವರು ಬೆಂಗಳೂರು ಕಾಲೇಜೊಂದರಲ್ಲಿ ಉದ್ಯೋಗಿಯಾಗಿದ್ದು ವಿಟ್ಲ ಪೆರುವಾಯಿ ನಿವಾಸಿಯಾಗಿದ್ದಾರೆ.