ಪುತ್ತೂರು: ಆರ್ಯಾಪು ಗ್ರಾಮದ ಸಿಂಹವನ ಎಂಬಲ್ಲಿ ಮಲ್ಲು ಎಂಬವರ ಮನೆಗೆ ಭಾರೀ ಮಳೆಗೆ ಮರಬಿದ್ದು ಮನೆ ಸಂಪೂರ್ಣ ನಾಶವಾದ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು ಜು.4ರಂದು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್, ನಗರಪಾಲಿಕೆ ಕಮೀಶನರ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ. ಬಿ. ವಿಶ್ವನಾಥ ರೈ, ಉಪಾದ್ಯಕ್ಷ ಮೌರಿಸ್ ಮಸ್ಕರೇನಸ್, ST ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಸಿದ್ದೀಕ್ ಸುಲ್ತಾನ್, ಬೂತ್ ಅಧ್ಯಕ್ಷ ದೇವರಾಜ್ ಸಿಂಹವನ, ಸಲಾಂ ಸಂಪ್ಯ, ನಿಝಾರ್ ಸಂಪ್ಯ ಉಪಸ್ಥಿತರಿದ್ದರು.
