ಕುಂಬ್ರ: ಮೂರು ದಿನಗಳಿಂದ ಕತ್ತಲು-ಶಾಸಕರ ಸೂಚನೆಯನ್ನು ಧಿಕ್ಕರಿಸಿದ ಮೆಸ್ಕಾಂ?

0


ಪುತ್ತೂರು: ಒಳಮೊಗ್ರು ಗ್ರಾಮದ ಮಗಿರೆ, ಕಡ್ತಿಮಾರ್, ಕೊಯಿಲತ್ತಡ್ಕ ಕೋಳಿಗದ್ದೆ , ಶಾಂತಿಯಡಿ ಸೇರಿದಂತೆ ಸುಮಾರು 200 ಮನೆಗಳಿಗೆ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಪೂರ್ತಿ ಕತ್ತಲೆಯಲ್ಲಿದ್ದಾರೆ. ಈ ಭಾಗದಲ್ಲಿ ಗಾಳಿ ಬಂದಿಲ್ಲ, ವಿದ್ಯುತ್ ಕಂಬವೂ ಮುರಿದಿಲ್ಲ ಆದರೂ ಕಳೆದ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗಿದೆ. ಯವ ಕಾರಣಕ್ಕೆ ಕರೆಂಟ್ ವ್ಯಥ್ಯಯ ಉಂಟಾಗಿದೆ ಎಂಬುದಕ್ಕೆ ಸಮರ್ಪಕ ಉತ್ತರವಿಲ್ಲ. ಕುಂಬ್ರ ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಈ ಭಾಗದ ಜನರದ್ದು.


ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಮೆಸ್ಕಾಂ ಎಚ್ಚರ ವಹಿಸಬೇಕು ಮತ್ತು ಏನೇ ಆದರೂ 24 ಗಂಟೆಯೊಳಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಬೇಕು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನು ನೀಡಿದ್ದರು. ಆದರೆ ಮೆಸ್ಕಾಂ ಶಾಸಕರ ಸೂಚನೆಯನ್ನು ಧಿಕ್ಕರಿಸಿದ್ದು ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here