ತಿಂಗಳಾಡಿ: ನಿವೃತ್ತ ಕೆಎಸ್ಆರ್ ಟಿಸಿ ಸಿಬ್ಬಂದಿ ದಯಾನಂದ ಶೆಟ್ಟಿ (75) ಅನಾರೋಗ್ಯದಿಂದಾಗಿ ನಿಧನರಾದರು. ತಿಂಗಳಾಡಿ ಮಠದ ನಿವಾಸಿಯಾಗಿರುವ ದಯಾನಂದ ಶೆಟ್ಟಿ ಅವರು ಕೆಎಸ್ಆರ್ ಟಿಸಿ ಯಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿವೃತ್ತರಾಗಿದ್ದರು.

ಮೃತರು ಪತ್ನಿ ಚಂದ್ರಾವತಿ ಮಕ್ಕಳಾದ ಕೆದಂಬಾಡಿ ಗ್ರಾ.ಪಂ. ನ ಮಾಜಿ ಅಧ್ಯಕ್ಷ, ಹಾಲಿ ಗ್ರಾ. ಪಂ. ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ,ಸುಗುಣ, ಸುಧಾ, ಸುಕನ್ಯಾ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.