





ರಾಮಕುಂಜ: ಶ್ರೀ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ, ಸುಳ್ಯಪದವು ಇಲ್ಲಿ ನಡೆದ ತಾಲೂಕು ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರವಣ್ ಕುಮಾರ್, ಜೀವಿತಾ, ಪೂಜಾಶ್ರೀಯವರು ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.


ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ನಾರಾಯಣ ರಾವ್ ಹಾಗೂ ಶಾಲಾ ಕನ್ನಡ ಶಿಕ್ಷಕಿ ಶೋಭಾಕುಮಾರಿ ತರಬೇತಿ ನೀಡಿದ್ದರು. ಶಾಲಾ ಮುಖ್ಯಗುರು ಹಾಗೂ ಶಿಕ್ಷಕ ವೃಂದ ಸಹಕರಿಸಿದ್ದರು.















