ನಿಡ್ಪಳ್ಳಿ ಪಟ್ಟೆ ನಾಕುಡೇಲು ಹನುಮಗಿರಿ ರಸ್ತೆ ಬದಿ ಗುಡ್ಡ ಕುಸಿತ

0

ನಿಡ್ಪಳ್ಳಿ; ಕುಕ್ಕುಪುಣಿಯಿಂದ ನಾಕುಡೇಲು ಹನುಮಗಿರಿ ಹೋಗುವ ರಸ್ತೆಯಲ್ಲಿ ಪಟ್ಟೆ ಎಂಬಲ್ಲಿ ರಸ್ತೆ ಬದಿ ಗುಡ್ಡ ಜು.6 ರಂದು ರಾತ್ರಿ ಕುಸಿದು ಬಿದ್ದಿದೆ.

ಗುಡ್ಡ ಕುಸಿದ ಪರಿಣಾಮ ನೀರು ಹರಿಯುವ ಚರಂಡಿ ಮುಚ್ಚಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ಗುಡ್ಡ ಇನ್ನಷ್ಟು ಜರಿದು ಬೀಳುವ ಸಂಭವವಿದ್ದು ದೊಡ್ಡ ಗಾತ್ರದ ಮರ ಒಂದು ಬದಿಯಲ್ಲಿದೆ. ಕಳೆದ ಮಳೆಗಾಲದಲ್ಲಿಯೂ ಇಲ್ಲಿ ಜರಿದು ಬಿದ್ದು ಅಪಾಯಕಾರಿ ಸ್ಥಿತಿಯಲ್ಲಿ ಇತ್ತು. ಈ ಸಲ ಪುನಃ ಕುಸಿದು ಬಿದ್ದು ಇನ್ನೂ ಬೀಳುವ ಸ್ಥಿತಿಯಲ್ಲಿದೆ. ವಾಹನ ಸಂಚಾರ ಇರುವ ಸಮಯದಲ್ಲಿ ಎಲ್ಲಿಯಾದರೂ ಬಿದ್ದರೆ ಅನಾಹುತವಾದೀತು. ಅಲ್ಲದೆ ಆ ಗುಡ್ಡದ ಬದಿಯಲ್ಲಿ ಮೇಲೆ ಒಂದು ಮನೆಯೂ ಇದ್ದು ಇನ್ನಷ್ಟು ಅಪಾಯ ಸಂಭವಿಸಬಹುದು ಎಂದು ಜನ ಅಭಿಪ್ರಾಯ ಪಡುತ್ತಿದ್ದು ಸಂಬಂಧ ಪಟ್ಟವರು ತಕ್ಷಣ ಇದರ ನಿರ್ವಹಣೆ ಮಾಡಬೇಕಾಗಿದೆ.

LEAVE A REPLY

Please enter your comment!
Please enter your name here