ಪುತ್ತೂರು: ಸರ್ವೆ ಗ್ರಾಮದ ಸೊರಕೆ ದಿ.ಅಚ್ಚುತ್ತ ಪೂಜಾರಿ ಸೊರಕೆಯವರ ಪತ್ನಿ ಸುನೀತಿ(92.ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.8ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಅಶೋಕ್ ಕುಮಾರ್ ಸೊರಕೆ, ಮಾಜಿ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ, ಪುತ್ರಿಯರಾದ ಶಶಿಕಲಾ, ಶರತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ತಾಯಿ ಸುನೀತಿ ಮೃತಪಟ್ಟ ಸಂದರ್ಭ ವಿನಯಕುಮಾರ್ ಸೊರಕೆ ಅವರು ಬೆಂಗಳೂರಿನಲ್ಲಿದ್ದು ಮದ್ಯಾಹ್ನದ ವೇಳೆಗೆ ಅವರು ಸೊರಕೆಯ ಮನೆ ತಲುಪಿದ್ದಾರೆ. ಸಂಜೆ ವೇಳೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮೃತರ ಮನೆಗೆ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಜೆ.ಆರ್ ಲೋಬೋ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್, ದೇವಿಪ್ರಸಾದ್ ಶೆಟ್ಟಿ ಉಡುಪಿ, ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಅಬ್ದುಲ್ ಶಕೂರ್ ಹಾಜಿ, ಆರ್ಯಾಪು ಸಿ.ಎ ಬ್ಯಾಂಕ್ ಅಧ್ಯಕ್ಷ ಮಹಮ್ಮದ್ ಆಲಿ, ಮುಂಡೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ಇಂಟೆಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕರಾದ ಎಸ್‌ಡಿ ವಸಂತ, ಶಿವನಾಥ ರೈ ಮೇಗಿನಗುತ್ತು, ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ಕರುಣಾಕರ ಗೌಡ ಎಲಿಯ, ಮಹಮ್ಮದ್ ಆಲಿ, ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಸೇವಾ ದಳದ ಮುಖಂಡ ಜೋಕಿಂ ಡಿಸೋಜಾ, ರೆಂಜಲಾಡಿ ಮಸೀದಿ ಪ್ರ.ಕಾರ್ಯದರ್ಶಿ ಝೈನುದ್ದೀನ್ ಜೆ.ಎಸ್, ಜಿ.ಪಂ ಮಾಜಿ ಸದಸ್ಯ ಪಿ.ಪಿ ವರ್ಗೀಸ್, ಪ್ರಮುಖರಾದ ವೇದನಾಥ ಸುವರ್ಣ ನರಿಮೊಗರು, ಜಿ.ಕೃಷ್ಣಪ್ಪ, ಕೃಷ್ಣಪ್ರಸಾದ್ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ಶೆಟ್ಟಿ, ಹರ್ಷದ್ ದರ್ಬೆ, ಶಿವರಾಮ ಆಳ್ವ, ಥೋಮಸ್ ಕಡಬ, ಇಬ್ರಾಹಿಂ ಮುಲಾರ್ ಮತ್ತಿತರ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.