ಪುತ್ತೂರು: ಮಾಯಿದೆ ದೇವುಸ್ ಚರ್ಚ್ ನ ಪರಿಸರ ಆಯೋಗ, ಕಥೋಲಿಕ್ ಸಭಾ ಹಾಗೂ ಐಸಿವೈಎಂ ಇದರ ಆಶ್ರಯದಲ್ಲಿ ವನಮಹೋತ್ಸವದ ಪ್ರಯುಕ್ತ ಸಸಿ ವಿತರಣೆ ಕಾರ್ಯಕ್ರಮ ಜು.09 ರಂದು ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಜರಗಿತು.
ಗಿಡಗಳಾದ ಸಾಗುವಾನಿ, ಮಹಾಗನಿ, ನೇರಳೆ, ಸಂಪಿಗೆ, ಪುನರ್ಪುಳಿ, ಮಂತ್ ಹುಳಿ, ರೆಂಜೆ, ಶ್ರೀಗಂಧ, ಹಲಸು, ಜಂಬು ನೇರಳೆ ಹಾಗೂ ವಿವಿಧ ಅರಣ್ಯ ಜಾತಿಯ ಗಿಡಗಳು ಹಾಗೂ ಹಣ್ಣುಹಂಪಲು ಸಸಿಗಳು ಸುಮಾರು 300ಕ್ಕೂ ಮಿಕ್ಕಿ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟ, ಕಾರ್ಯದರ್ಶಿ ಎವ್ಲಿನ್ ಡಿ’ಸೋಜ, ಚರ್ಚ್ ಆಯೋಗಗಳ ಸಂಚಾಲಕ ಜೋನ್ ಡಿ’ಸೋಜ, ಕಥೋಲಿಕ್ ಸಭಾ ಅಧ್ಯಕ್ಷ ಅರುಣ್ ಪಿಂಟೋ, ಉಪಾಧ್ಯಕ್ಷ ರೋಯ್ಸ್ ಪಿಂಟೋ, ಕಾರ್ಯದರ್ಶಿ ಪಾವ್ಲ್ ಮೊಂತೇರೊ,ಕೋಶಾಧಿಕಾರಿ ರೋಶನ್ ಡಾಯಸ್, ಕಥೋಲಿಕ್ ಸಭಾ ವಲಯಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಐಸಿವೈಎಂ ಅಧ್ಯಕ್ಷ ರೋಯಿಸ್ಟನ್ ರೆಬೆಲ್ಲೊ, ಲಿಯಾನ್ನಾ ರೊಡ್ರಿಗಸ್, ಸಿ.ಎಲ್.ಸಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜ ಹಾಗೂ ಸದಸ್ಯರು, ಡೊನ್ ಬೊಸ್ಕೊ ಅಧ್ಯಕ್ಷ ಆಂಟನಿ ಒಲಿವೆರಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.