ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಬೂಡಿಯಾರು ರಾಧಾಕೃಷ್ಣ ರೈ, ಕಾರ್ಯದರ್ಶಿಯಾಗಿ ರವಿಕುಮಾರ್ ರೈ, ಕೋಶಾಧಿಕಾರಿಯಾಗಿ ಶಶಿಧರ್ ಕಿನ್ನಿಮಜಲುರವರು ಅಧಿಕಾರ ಸ್ವೀಕರಿಸಲಿರುವರು.
ಉಳಿದಂತೆ ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಡಾ.ರವಿಪ್ರಕಾಶ್ ಕಜೆ, ನಿಕಟಪೂರ್ವ ಅಧ್ಯಕ್ಷರಾಗಿ ಶರತ್ ಕುಮಾರ್ ರೈ, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಎಸ್, ಬುಲೆಟಿನ್ ಎಡಿಟರ್ ಆಗಿ ಡಾ.ಶ್ಯಾಮ್ ಪ್ರಸಾದ್, ಸಾರ್ಜಂಟ್ ಎಟ್ ಆಮ್ಸ್೯ ಶಶಿಕಿರಣ್ ರೈ ನೂಜಿಬೈಲು, ಎಕ್ಸ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಕೆ.ವಿಶ್ವಾಸ್ ಶೆಣೈ ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಮುರಳೀಶ್ಯಾಂ,ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಜಯಂತ್ ನಡುಬೈಲು, ಯೂತ್ ಸರ್ವಿಸ್ ನಿರ್ದೇಶಕರಾಗಿ ಅಬ್ಬಾಸ್ ಕೆ.ಮುರ, ಚೇರ್ ಮ್ಯಾನ್ ಗಳಾಗಿ ಕೃಷ್ಣ ಭಟ್(ಮೆಂಬರ್ ಶಿಪ್), ಶರತ್ ಕುಮಾರ್ ರೈ(ಟಿ.ಆರ್.ಎಫ್), ಡಾ.ಈಶ್ವರ್ ಪ್ರಕಾಶ್(ಪಲ್ಸ್ ಪೋಲಿಯೋ), ಡ್ಯಾ.ಶ್ಯಾಮ್ ಪ್ರಸಾದ್(ಐಟಿ/ವೆಬ್ ಸೈಟ್), ವಸಂತ ಜಾಲಾಡಿ(ಜಿಲ್ಲಾ ಪ್ರಾಜೆಕ್ಟ್)ರವರು ಅಧಿಕಾರ ಸ್ವೀಕರಿಸಲಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೂಡಿಯಾರು ರಾಧಾಕೃಷ್ಣ ರೈಯವರು ತಂದೆ ದಿ.ಮುಂಡಾಳಗುತ್ತು ಸಂಕಪ್ಪ ರೈ ಹಾಗೂ ತಾಯಿ ದಿ.ಪದ್ಮಾವತಿ ರೈಯವರ ಪುತ್ರನಾಗಿ ಜನಿಸಿದ್ದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುರಿಯ ಪ್ರಾಥಮಿಕ ಶಾಲೆ, ಪ್ರೌಢಶಿಕ್ಷಣವನ್ನು ಸಂತ ಫಿಲೋಮಿನಾ ಬಾಲಕರ ಪ್ರೌಢಶಾಲೆ, ಪದವಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜು ಹಾಗೂ ಕೋಲಾರ ಗೋಲ್ಡ್ ಫೀಲ್ಡ್ನಲ್ಲಿ ಡಿಪ್ಲೊಮಾ ಇನ್ ಮೈನಿಂಗ್ ಪದವಿಯನ್ನು ಮುಗಿಸಿದ್ದಾರೆ. ಹುಟ್ಟು ಕೃಷಿಕರಾಗಿರುವ ಇವರು ತಮ್ಮ 60 ಎಕರೆ ಜಮೀನಿನಲ್ಲಿ ಭತ್ತ,ಅಡಿಕೆ,ತೆಂಗು,ರಬ್ಬರ್,ಗೇರು, ಕಾಳು ಮೆಣಸು, ಕೊಕ್ಕೊ ಹಾಗೂ ವಿವಿಧ ರೀತಿಯ ಹಣ್ಣುಗಳ ಬೆಳೆಗಳನ್ನು ಬೆಳೆಯುತ್ತಿದ್ದು, ಕೋಳಿ ಸಾಕಾಣಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರೊಂದಿಗೆ ಇವರು 10 ವರ್ಷಗಳಿಂದ ಕುಂಬ್ರದಲ್ಲಿ ಬೂಡಿಯಾರ್ ಇಂಡೇನ್ ಗ್ಯಾಸ್ ಎಂಬ ಸಂಸ್ಥೆಯನ್ನು ನಿರ್ವಹಿಸುತ್ತಿದ್ದು ಯಶಸ್ವಿ ಉದ್ಯಮಿ ಎಂಬ ಹೆಸರು ಗಳಿಸಿದ್ದಾರೆ. ಕುರಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ, ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ಕಾರ್ಯಾಧ್ಯಕ್ಷ ಸಮಿತಿ ಮತ್ತು ಗೌರವಾಧ್ಯಕ್ಷರಾಗಿ, ಅಗರ್ತಬೈಲು ವೆಂಕಟ್ರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ, ಬೀಡು ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾಗಿ, ಬಂಟರ ಸಂಘ ಪುತ್ತೂರು ತಾಲೂಕು ಇದರ ಅಧ್ಯಕ್ಷರಾಗಿ 2 ವರ್ಷ ಸೇವೆ, ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇದರ ಸದಸ್ಯರಾಗಿ, ವರ್ಲ್ಡ್ ಬಂಟ್ಸ್ ಅಸೋಸಿಯೇಶನ್ ಮತ್ತು ವರ್ಲ್ಡ್ ಬಂಟ್ಸ್ ಫೆಡರೇಶನ್ನಲ್ಲಿ ಸದಸ್ಯರಾಗಿ, ಆರ್ಯಾಪು ಸಹಕಾರಿ ಸಂಘದಲ್ಲಿ ಸತತ 15 ವರ್ಷ ಅಧ್ಯಕ್ಷರಾಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 5 ವರ್ಷ ಅಧ್ಯಕ್ಷರಾಗಿ, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ 20 ವರ್ಷಗಳಿಂದ ಅಧ್ಯಕ್ಷ, ದ.ಕ ಜಿಲ್ಲಾ ಹಾಲು ಒಕ್ಕೂಟ, ಮಂಗಳೂರು ಕೃಷಿಕರ ಸೌಹಾರ್ದ ಸಹಕಾರಿ ಸಂಘದಲ್ಲಿ ೫ ವರ್ಷ ನಿರ್ದೇಶಕರಾಗಿ, ಪುತ್ತೂರ ಮುತ್ತು ರೈತ ಉತ್ಪಾದಕರ ಸಂಸ್ಥೆ ನಿಯಮಿತ ಇದರ ಸ್ಥಾಪಕಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕುರಿಯ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕಾರ ಪಡೆದುಕೊಂಡು ನಡೆಸುತ್ತಿದ್ದು, ಭತ್ತದ ಕೃಷಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಒಂದು ಬಾರಿ ಹಾಗೂ ದ್ವಿತೀಯ ಸ್ಥಾನ ಒಂದು ಬಾರಿ ಪ್ರಶಸ್ತಿ, ಹೈನುಗಾರಿಕೆಯಲ್ಲಿ ಕೂಡ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಇವರು ಜನತಾ ಪಕ್ಷ, ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದು ಪ್ರಸ್ತುತ ದ.ಕ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕುರಿಯ ಗ್ರಾಮದ ಬೂಡಿಯಾರಿನಲ್ಲಿ ಪತ್ನಿ ಜಯಲಕ್ಷ್ಮಿ ಆರ್.ರೈ, ಪುತ್ರಿಯರಾದ ಸಾಕ್ಷತಾ ಶೆಟ್ಟಿ, ಅಳಿಯ ಗಿರೀಶ್ ಶೆಟ್ಟಿ, ಮೊಮ್ಮಗ ವೇದಾನ್ಶ್, ಪುತ್ರಿ ರಕ್ಷತಾ ಶೆಟ್ಟಿ, ಅಳಿಯ ಅಕ್ಷತ್ ಶೆಟ್ಟಿಯವರನ್ನು ಹೊಂದಿರುತ್ತಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ರವಿಕುಮಾರ್ ರೈ ಕೆದಂಬಾಡಿಯವರು ತಂದೆ ರಘುನಾಥ ರೈ ಹಾಗೂ ತಾಯಿ ದಿ.ಶೀಲಾವತಿ ರೈಯವರ ಪುತ್ರನಾಗಿ ಜನಿಸಿದ್ದು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಿಂಗಳಾಡಿ ಸರಕಾರಿ ಶಾಲೆ, ಪ್ರೌಢಶಿಕ್ಷಣವನ್ನು ಸರ್ವೆ ಕಲ್ಪನೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿರುತ್ತಾರೆ. ಬಳಿಕ ಸೆಲ್ಕೋ ಸೋಲಾರ್ ಸಂಸ್ಥೆಯಲ್ಲಿ 12 ವರ್ಷಗಳ ಕಾಲ ಕೋಲಾರದಲ್ಲಿ ಸೇವೆ, 2014ರಿಂದ ಬೆಳ್ಳಾರೆಯಲ್ಲಿ ಮಾತೃಶಿ ಸೋಲಾರ್ ಮತ್ತು ಇನ್ವರ್ಟರ್ ಸಿಸ್ಟಮ್ ಸ್ಥಾಪಿಸಿ ಪುತ್ತೂರುನಲ್ಲಿಯೂ ಶಾಖೆಯನ್ನು ಹೊಂದಿರುತ್ತಾರೆ. ಇದಲ್ಲದೆ ಎಚ್.ಡಿ.ಎಫ್.ಸಿ ಬ್ಯಾಂಕಿನ ಇನ್ಶೂರೆನ್ಸ್ನಲ್ಲಿ ಅಡ್ವೈಸರ್ ಆಗಿದ್ದು ಮಲೇಷಿಯಾ ಮತ್ತು ಶ್ರೀಲಂಕಾ ದೇಶದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ ಮತ್ತು ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಇಲ್ಲಿನ ಜೀವ ವಿಮಾ ಪ್ರತಿನಿಧಿಯಾಗಿದ್ದಾರೆ. ರವಿಕುಮಾರ್ರವರು ಶ್ರೀ ದೇವತಾ ಭಜನಾ ಮಂದಿರ ತಿಂಗಳಾಡಿ ಇಲ್ಲಿನ ಶ್ರೀ ಕೃಷ್ಣ ಮಿತ್ರವೃಂದದ ಅಧ್ಯಕ್ಷರಾಗಿ, ಪ್ರಸ್ತುತ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ಕೃಷ್ಣ ಮಿತ್ರವೃಂದ ಇದರ ನಾಟಕ ತಂಡದ ಸದಸ್ಯರಾಗಿದ್ದು 15ಕ್ಕೂ ಹೆಚ್ಚು ತುಳು ಮತ್ತು ಕನ್ನಡ ನಾಟಕದಲ್ಲಿ ನಾಯಕಿಯಾಗಿ, ನಾಯಕ, ಹಾಗೂ ವಿಲನ್ ಪಾತ್ರಗಳಲ್ಲಿ ನಟನೆ ಮಾಡಿರುತ್ತಾರೆ ಅದಲ್ಲದೆ, ಸಂಗೀತದಲ್ಲಿಯೂ ಆಸಕ್ತಿ ಹೊಂದಿದ್ದು ಕರೋಕೆ ಹಾಡುಗಾರ, ರೋಟರಿಯಂತಹ ಅಂತಾರಾಷ್ಟ್ರೀಯ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡಿ ಪ್ರಶಸ್ತಿ ಪಡೆದಿರುತ್ತಾರೆ. ಇವರು ಉತ್ತಮ ಕ್ರಿಕೆಟ್ ಮತ್ತು ಅಥ್ಲೆಟಿಕ್ ಆಟಗಾರರಾಗಿದ್ದು, ರೋಟರಿಯಲ್ಲಿ ನಡೆಯವ ಜಿಲ್ಲಾ ಮಟ್ಟದ, ವಲಯ ಮಟ್ಟದ ಕ್ರಿಕೆಟ್ನಲ್ಲಿ ಅನೇಕ ಬಾರಿ ರೋಟರಿ ಪುತ್ತೂರು ಈಸ್ಟ್ನ ಕಪ್ತಾನನಾಗಿದ್ದು ಅನೇಕ ಬಾರಿ ಚಾಂಪಿಯನ್ ಆಗಿ ತಂಡಕ್ಕೆ ಕೊಡುಗೆಯನ್ನು ಮತ್ತು 100ಮೀ, 200ಮೀ ರಿಲೇ, ಲಾಂಗ್ ಜಂಪ್ನಲ್ಲಿ ಚಾಂಪಿಯನ್ ಆಗಿರುತ್ತಾರೆ, ಅಲ್ಲದೆ ಕೆದಂಬಾಡಿಯಲ್ಲಿ ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿದ್ದು ಅನೇಕ ಸಮಾಜಮುಖಿ ಕೆಲಸಗಳನ್ನು ಈ ಕ್ಲಬ್ಬಿನ ಮುಖಾಂತರ ಮಾಡುತ್ತಿದ್ದಾರೆ.
ಜಯಕರ್ನಾಟಕ ಕೆದಂಬಾಡಿ ಘಟಕದ ಅಧ್ಯಕ್ಷರಾಗಿ, ಪ್ರಸ್ತುತ ಜಯಕರ್ನಾಟಕ ಜನಪರ ವೇದಿಕೆ ಇದರ ತಾಲೂಕು ಸಮಿತಿಯ ಸದಸ್ಯರಾಗಿ, ರೋಟರಾಕ್ಟ್ ತಿಂಗಳಾಡಿ ಇದರ ಸದಸ್ಯರಾಗಿ, ಅಧ್ಯಕ್ಷರಾಗಿ, ವಲಯ ಮತ್ತು ಜಿಲ್ಲಾಮಟ್ಟದಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ, ಜಿಲ್ಲೆಯಲ್ಲಿ ಮತ್ತು ವಲಯ ಮಟ್ಟದಲ್ಲಿ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಪಡೆದು ಕೊಂಡಿರುತ್ತಾರೆ. ನಂತರ 2016/17ಕ್ಕೆ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯರಾಗಿ ರೋಟರಿ ಈಸ್ಟ್ನಲ್ಲಿ ಕ್ಲಬ್ಬಿನ ಯೂತ್ ಸರ್ವಿಸ್ ನಿರ್ದೇಶಕ, ರೋಟರಾಕ್ಟ್ ತಿಂಗಳಾಡಿಯ ಸಭಾಪತಿಯಾಗಿ, ವಲಯ ಮಟ್ಟದ ಕ್ರೀಡಾ ಕಾರ್ಯದರ್ಶಿಯಾಗಿ ಜಿಲ್ಲಾಮಟ್ಟದ ಕ್ರೀಡಾ ಕಾರ್ಯದರ್ಶಿಯಾಗಿ, ರೋಟರಿ ಪ್ರೀಮಿಯರ್ ಲೀಗ್ನ ಕಾರ್ಯದರ್ಶಿಯಾಗಿ, ವಲಯ ಕ್ರೀಡಾ ಕೋ-ಆರ್ಡಿನೇಟರ್ ಆಗಿ, 2020/21ನೇ ಸಾಲಿನ ಕ್ಲಬ್ಬಿನ ಕಾರ್ಯದರ್ಶಿಯಾಗಿ, ಪ್ರಸ್ತುತ ರೋಟರಿ ಕ್ಲಬ್ ಪುತ್ತೂರು ಈಸ್ಟ್ನ ಸ್ವಚ್ಛ ಭಾರತ್ ಟ್ರಸ್ಟಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರವಿಕುಮಾರ್ ರೈಯವರು ತಿಂಗಳಾಡಿ ಎಲಿಯ ಎಂಬಲ್ಲಿ ಪತ್ನಿ ಕವಿತಾ, ಮಗಳು ಉನ್ನತಿ, ಮಗ ಉದಿತ್ ರೈರವರೊಂದಿಗೆ ವಾಸವಾಗಿದ್ದಾರೆ.
ನೂತನ ಕೋಶಾಧಿಕಾರಿ ಪರಿಚಯ:
ಪುತ್ತೂರು ತಾಲೂಕು ಕುರಿಯ ಗ್ರಾಮದ ಕಿನ್ನಿಮಜಲು ಗರಡಿ ಮನೆತನದ ದಿ.ಗಿರಿಯಪ್ಪ ಪೂಜಾರಿ ಹಾಗೂ ಶೀಲಾವತಿ ದಂಪತಿ ಪುತ್ರನಾಗಿರುವ ಶಶಿಧರ್ ಕಿನ್ನಿಮಜಲುರವರು ತನ್ನ ವಿದ್ಯಾಭ್ಯಾಸವನ್ನು ಕುರಿಯ ಶಾಲೆಯಲ್ಲಿ, ಫಿಲೋಮಿನಾ ಪ್ರೌಢಶಾಲೆ, ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ. ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ಪುತ್ತೂರು ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಯುವವಾಹಿನಿ ಕೇಂದ್ರ ಸಮಿತಿಯ ನಿರ್ದೇಶಕರಾಗಿ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿಯಾಗಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಮಾಜಿ ಕಾರ್ಯದರ್ಶಿಯಾಗಿ, ನಿರ್ದೇಶಕನಾಗಿ, ಬಿಲ್ಲವ ಗ್ರಾಮ ಸಮಿತಿ ಕುರಿಯ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜು.10 ರಂದು ಪದಪ್ರದಾನ..
ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.10 ರಂದು ಮನೀಷಾ ಡಾ.ಸೂರ್ಯ ಸಭಾಂಗಣದಲ್ಲಿ ಜರಗಲಿದೆ. ಪದಪ್ರದಾನ ಅಧಿಕಾರಿಯಾಗಿ ರೋಟರಿ ವಲಯ ಏಳರ ಅಸಿಸ್ಟೆಂಟ್ ರೋಟರಿ ಕೋ-ಆರ್ಡಿನೇಟರ್ ಪಿಡಿಜಿ ಎಂ.ರಂಗನಾಥ್ ಭಟ್ ರವರು ಪದಪ್ರದಾನವನ್ನು ನೆರವೇರಿಸಲಿರುವರು. ರೋಟರಿ ವಲಯ ಐದರ ಅಸಿಸ್ಟೆಂಟ್ಬ ಗವರ್ನರ್ ಪುರಂದರ ರೈ, ವಲಯ ಸೇನಾನಿ ಭಾಸ್ಕರ್ ಕೋಡಿಂಬಾಳರವರು ಉಪಸ್ಥಿತಲಿರುವರು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.