




ಪುತ್ತೂರು: ಬದಿಯಡ್ಕದಲ್ಲಿ ರಸ್ತೆ ಅಪಘಾತಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಪುತ್ತೂರು ಬನ್ನೂರು ನಿವಾಸಿ ಪಂಚಾಕ್ಷರಿ ಲೈಟಿಂಗ್ಸ್ನ ಮಾಲಕ ಗಣೇಶ್ ಗೌಡ ಅವರ ಚಿಕಿತ್ಸೆಗೆ ಪುತ್ತೂರು ಜಾತ್ರೆ ವ್ಯಾಪಾರಸ್ಥರ ಸಂಘದಿಂದ ಆರ್ಥಿಕ ನೆರವನ್ನು ನೀಡಲಾಯಿತು.



ಪುತ್ತೂರು ಜಾತ್ರೆ ವ್ಯಾಪರಸ್ಥರ ಸಂಘದ ಪ್ರಮುಖರಾದ ಮೋನಪ್ಪ, ಮುತ್ತಪ್ಪ, ಅಭಿಲಾಶ್, ನವೀನ್, ದೇವಿಪ್ರಸಾದ್, ರವಿ ಅವರು ಆರ್ಥಿಕ ನೆರವನ್ನು ಗಣೇಶ್ ಗೌಡ ಅವರ ಮನೆಯವರಿಗೆ ಹಸ್ತಾಂತರಿಸಿದರು.















