ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಎನ್ ಎಸ್ ಡಿಯವರಿಂದ ಭಕ್ತಕೋಡಿ ಹಿ. ಪ್ರಾ ಶಾಲೆಗೆ ಕ್ರೀಡಾ ಸಾಮಗ್ರಿಗಳ ಕೊಡುಗೆ

0

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಭಕ್ತಕೋಡಿ ಶಾಲೆಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು ಆದ, ಎಸ್ ಡಿ ಎಂ ಸಿ ಯ ನಾಮ ನಿರ್ದೇಶಿತ ಸದಸ್ಯರು, ಮುಂಡೂರು ಗ್ರಾಮ ಪಂಚಾಯತ್ ಸದಸ್ಯರು, ಸರ್ವೆ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಚಂದ್ರಶೇಖರ್ ಎನ್ ಎಸ್ ಡಿ ಸರ್ವೆ ದೋಳ ಇವರು ಸುಮಾರು 6 ಸಾವಿರ ರೂ ಮೌಲ್ಯದ ಕ್ರೀಡಾ ಸಾಮಗ್ರಿಗಳಾದ ಶಟಲ್ ಬ್ಯಾಟ್, ಕಾಕ್, ವಾಲಿಬಾಲ್ 2, ಶಟಲ್ ಬ್ಯಾಡ್ಮಿಂಟನ್ ನೆಟ್, ಡಿಸ್ಕಸ್ ಇವುಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ನರಿಮೊಗರು ಸಮೂಹ ಸಂಪನ್ಮೂಲ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್, ಶಾಲಾ ಮುಖ್ಯ ಗುರುಗಳಾದ ಗೀತಾ ಕುಮಾರಿ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here