ಪೆರಾಬೆ: ಕುಂತೂರುಪದವು ಸರಕಾರಿ ಹಿ.ಪ್ರಾ.ಶಾಲೆಯ ಶಾಲಾ ಮಂತ್ರಿಮಂಡಲವನ್ನು ಇತ್ತೀಚೆಗೆ ರಚಿಸಲಾಯಿತು. ಶಾಲಾ ನಾಯಕನಾಗಿ 7ನೇ ತರಗತಿಯ ಲಿಖಿತ್ ಕೆ., ಹಾಗೂ ಉಪನಾಯಕಿಯಾಗಿ 6ನೇ ತರಗತಿಯ ಯಕ್ಷಿತಾ ಎನ್.ಟಿ.ಆಯ್ಕೆಯಾದರು.
ಗೃಹ ಮಂತ್ರಿಯಾಗಿ ಪ್ರಜ್ವಲ್ ಡಿ.ಸೋಜ 7ನೇ, ಶಿಕ್ಷಣ ಮಂತ್ರಿಯಾಗಿ ಆರ್.ಅಶ್ವಿನ್ 7ನೇ, ಆರೋಗ್ಯ ಮಂತ್ರಿಯಾಗಿ ಅಪೂರ್ವ ಹಿರೇಮಠ್ 7ನೇ, ಸಾಂಸ್ಕೃತಿಕ ಮಂತ್ರಿಯಾಗಿ ರಮ್ಯ 7ನೇ, ತೋಟಗಾರಿಕಾ ಮಂತ್ರಿಯಾಗಿ ನಿಖಿಲ್, ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕೆ.ಎನ್.7ನೇ, ನೀರಾವರಿ ಮಂತ್ರಿಯಾಗಿ ಮನ್ವಿತ್ ಜೆ.7ನೇ, ಆಹಾರಮಂತ್ರಿಯಾಗಿ ಖತೀಜತುಲ್ ಅಫ್‌ರ, ವಾರ್ತಾಮಂತ್ರಿಯಾಗಿ ಗಗನ್ 7ನೇ, ಕ್ರೀಡಾಮಂತ್ರಿಯಾಗಿ ಜ್ಞಾನೇಶ್ 7ನೇ, ಸಭಾಪತಿಯಾಗಿ ಮನ್ವಿತ್ 7ನೇ, ವಿರೋಧ ಪಕ್ಷದ ನಾಯಕನಾಗಿ ಅವೀಝ್ ಆಯ್ಕೆಯಾದರು. ಮತದಾನ ಪ್ರಕ್ರಿಯೆಯ ಮೂಲಕ ಶಾಲಾ ನಾಯಕ, ಉಪನಾಯಕಿಯನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯಗುರು ಗಿರಿಜ ವಿ.ಮತದಾನ ಪ್ರಕ್ರಿಯೆಯ ಮಾರ್ಗದರ್ಶನ ನೀಡಿದರು. ಸಹಶಿಕ್ಷಕರಾದ ಕೇಶವ ಕೆ., ಶಿವಣ್ಣ, ಕುಸುಮ, ಗೌರವ ಶಿಕ್ಷಕಿ ಗಾಯತ್ರಿ ಸಹಕರಿಸಿದರು.