ಪುತ್ತೂರು: ತಾಲೂಕು ಕಛೇರಿಯಲ್ಲಿ ಸಾರ್ವಜನಿಕರು ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿಗಳನ್ನು ಸಲ್ಲಿಸಿದರೆ ಇವುಗಳಿಗೆ ಉತ್ತರ ನೀಡದೆ ಜನರನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಈಗಾಗಲೇ ಪುತ್ತೂರು ಸಹಾಯಕ ಆಯುಕ್ತರಿಗೆ ತಾಲೂಕು ಕಛೇರಿ ಮಾಹಿತಿ ನೀಡದ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಸಹಾಯಕ ಆಯುಕ್ತರು 15 ದಿನದ ಒಳಗಡೆ ಮಾಹಿತಿ ನೀಡಲು ಸೂಚಿಸಿದ್ದಾರೆ. ತಿಂಗಳು ಕಳೆದರೂ ಮಾಹಿತಿ ನೀಡಿಲ್ಲ. ಇನ್ನು ಸಮಸ್ಯೆಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಯಾವುದೇ ಮಾಹಿತಿಗಳನ್ನು ಈ ಕಛೇರಿ ನೀಡುತ್ತಾ ಇಲ್ಲ. ಸಂಬಂಧ ಪಟ್ಟ ತಹಶೀಲ್ದಾರರಲ್ಲಿ ಈ ಬಗ್ಗೆ ಮಾತನಾಡಿಸಲಾಗಿದೆ. ಆದರೂ ತಹಶೀಲ್ದಾರರು ಕೂಡ ಈ ಬಗ್ಗೆ ಸ್ಪಂದನೆ ನೀಡುತ್ತಾ ಇಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.