ಪುತ್ತೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ಜು.14ರಂದು ಅಣ್ಣನನ್ನೇ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಸಹೋದರರೀರ್ವರನ್ನು ಪೊಲೀಸರು ಕೇರಳದಲ್ಲಿ ಬಂಽಸಿದ್ದಾರೆ.ಚೆAಬು ಗ್ರಾಮದ ಕುದ್ರೆಪಾಯ ನಿವಾಸಿಯಾಗಿದ್ದು ಪುತ್ತೂರು ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉಸ್ಮಾನ್(50.ವ)ಎಂಬವರನ್ನು ಅವರ ಸಹೋದರರಾದ ಸತ್ತಾರ್ ಮತ್ತು ರಫೀಕ್ ಅವರು ಚೂರಿಯಿಂದ ತಿವಿದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಕೇರಳದ ರ‍್ನಾಕುಲಂನಲ್ಲಿ ಸಂಪಾಜೆ ಪೊಲೀಸರು ಬಂಽಸಿದ್ದಾರೆ ಎಂದು ತಿಳಿದು ಬಂದಿದೆ.
ಉಸ್ಮಾನ್ ಅವರ ತಂದೆ ಇಲ್ಲಿನ ಸಂಟ್ಯಾರ್ ಮೂಲದ ಇಬ್ರಾಹಿಂ ಹಾಜಿ ಎಂಬವರು ಅರಂತೋಡಿನಲ್ಲಿ ನೆಲೆಸಿ ಕುದ್ರೆಪಾಯದಲ್ಲಿ ಸುಮರು 50 ಎಕ್ರೆ ಕೃಷಿ ಭೂಮಿ ಖರೀದಿಸಿ ಕೃಷಿ ಪ್ರಾರಂಭಿಸಿದ್ದು ಸುಮಾರು 25 ವರ್ಷಗಳ ಹಿಂದೆ ಇಬ್ರಾಹಿಂ ಅವರು ನಿಧನ ಹೊಂದಿದ್ದರು. ನಂತರ ಆ ಜಾಗವನ್ನು ಉಸ್ಮಾನ್ ನೋಡಿಕೊಳ್ಳುತ್ತಿದ್ದರು.ಆ ಬಳಿಕ ಜಾಗ ಪಾಲು ಮಾಡಲಾಗಿದ್ದು ಉಸ್ಮಾನ್ ಅವರಿಗೆ ಹೆಚ್ಚು ಜಾಗ ಸಿಕ್ಕಿದೆ ಎಂದು ರಫೀಕ್, ಸತ್ತಾರ್, ಸಹೋದರರು ತಕರಾರು ತೆಗೆದಿದ್ದÀರು.ಆ ಬಳಿಕ ಸಹೋದರರೊಳಗೆ ಆಗಾಗ ಜಗಳವಾಗುತ್ತಿತ್ತು.ಜು.14ರಂದು ಬೆಳಿಗ್ಗೆ ಕುದ್ರೆಪಾಯದ ಜಾಗದಲ್ಲಿ ಸರ್ವೆ ಕಾರ್ಯ ಇದ್ದ ಕಾರಣ ಉಸ್ಮಾನ್ ಅವರು ಬೆಳಿಗ್ಗೆ ಬೇಗನೇ ಸಂಪ್ಯದ ಮನೆಯಿಂದ ಕುದ್ರೆಪಾಯಕ್ಕೆ ಹೋಗಿದ್ದರು.
ಅಲ್ಲಿಗೆ ಸಹೋದರರಾದ ರಫೀಕ್ ಮತ್ತು ಸತ್ತಾರ್ ಕೂಡಾ ಬಂದಿದ್ದರು. ಸರ್ವೆಗೆ ಬಂದಿದ್ದ ಅಽಕಾರಿಗಳು ತಮ್ಮ ಕಾರ್ಯವನ್ನು ಮುಗಿಸಿ ಹೊರಡುವ ಸಂದರ್ಭದಲ್ಲಿ ಅಲ್ಲೇ ಅಲ್ಪ ದೂರದಲ್ಲಿ ಉಸ್ಮಾನ್, ರಫೀಕ್ ಹಾಗೂ ಸತ್ತಾರ್ ಪರಸ್ಪರ ಮಾತನಾಡುತ್ತಿದ್ದರು.ಈ ವೇಳೆ ಮಾತಿಗೆ ಮಾತು ಬೆಳೆದಾಗ ಸತ್ತಾರ್ ಮತ್ತು ರಫೀಕ್ ಅವರು ಅಣ್ಣ ಉಸ್ಮಾನ್ ಅವರಿಗೆ ಚೂರಿಯಿಂದ ಏಕಾಏಕಿ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಉಸ್ಮಾನ್ ಅವರ ಕಿರುಚಾಟ ಕೇಳಿ ಅಲ್ಲೇ ಅಲ್ಪ ದೂರದಲ್ಲಿದ್ದ ಅಽಕಾರಿಗಳು ಸ್ಥಳಕ್ಕೆ ಓಡಿ ಹೋದಾಗ ಉಸ್ಮಾನ್ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರು.ಆರೋಪಿಗಳಾದ ಸತ್ತಾರ್ ಮತ್ತು ರಫೀಕ್ ಅಲ್ಲಿಂದ ಓಡಿ ಹೋಗಿದ್ದರು.
ರಿಕ್ಷಾದಲ್ಲಿ ಹೋಗಿದ್ದರು: ಬೆಳಿಗ್ಗೆ ಸುಳ್ಯದ ಅರಂತೋಡಿನಿAದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡು ಕುದ್ರೆಪಾಯಕ್ಕೆ ಬಂದಿದ್ದ ಸತ್ತಾರ್ ಮತ್ತು ರಫೀಕ್ ಸಹೋದರರು ಅಲ್ಲಿ ಕೃತ್ಯವೆಸಗಿದ ಬಳಿಕ ಅದೇ ರಿಕ್ಷಾದಲ್ಲಿ ಮತ್ತೆ ಅರಂತೋಡಿಗೆ ಬಂದಿದ್ದರು.ಅಲ್ಲಿAದ ಬೇರೊಂದು ರಿಕ್ಷಾದಲ್ಲಿ ಆಲೆಟ್ಟಿ ತನಕ ಬಂದಿದ್ದ ಅವರು ಅಲ್ಲಿ ರಿಕ್ಷಾದಿಂದ ಇಳಿದು ಪರಾರಿಯಾಗಿದ್ದರು.ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಇದೀಗ ಕೇರಳದ ರ‍್ನಾಕುಲಂನಲ್ಲಿ ಬಂಽಸಿದ್ದಾರೆ ಎಂದು ತಿಳಿದು ಬಂದಿದೆ.