ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಜು. 16 ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೋಳುವಾರು, ಪುತ್ತೂರು ಇಲ್ಲಿನ ಕಲಾವಿದರು ಭೀಷ್ಮ ವಿಜಯ ಎಂಬ ಪೌರಾಣಿಕ ಯಕ್ಷಗಾನ ತಾಳ ಮದ್ದಳೆಯಾಗಿ ಪ್ರಸ್ತುತ ಪಡಿಸಿದರು. ಈ ಸಂಧರ್ಭ ಸಂಸ್ಥೆಯ ಸಂಚಾಲಕ ಭಾಸ್ಕರ ಬಾರ್ಯರನ್ನು ದೇವಳದ ವತಿಯಿಂದ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡಿಂಬ್ರಿಗುತ್ತು ಕೊರಗಪ್ಪ ರೈಯವರ ಸೇವಾರ್ಥವಾಗಿ ದೇವಾಲಯದಲ್ಲಿ ಜರಗಿದ ರಂಗಪೂಜೆ ಪ್ರಯುಕ್ತ ಕೊರಗಪ್ಪ ರೈಯವರ ಪುತ್ರ ಅರುಣ ಕುಮಾರ್ ರೈ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಇವರಿಂದ ” ಭೀಷ್ಮ ವಿಜಯ ” ಯಕ್ಷಗಾನ ತಾಳ ಮದ್ದಳೆ ಯನ್ನು ವ್ಯವಸ್ಥೆಗೊಳಿಸಿದ್ದರು. ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ್ ರಾವ್ ಕೊಡ್ಲಾರು, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಧು ನರಿಯೂರು ಮತ್ತು ಸದಸ್ಯರುಗಳಾದ ಜೈರಾಜ್ ಭಂಡಾರಿ, ಜಯಶೀಲ ರೈ ಕುರಿಯ ಏಳ್ನಾಡುಗುತ್ತು, ಜಯರಾಮ ರೈ ಅಡ್ಯೆತ್ತಿಮಾರು, ಗುಣಪಾಲ ಗೌಡ ಉಳ್ಳಾಲ, ಧನರಾಜ್ ಅಲೇಕಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಶಿವರಾಮ ಆಳ್ವ ಬಳ್ಳಮಜಲು, ಸುರೇಂದ್ರ ರೈ ಬಳ್ಳಮಜಲು, ಚಂದ್ರಹಾಸ ರೈ ತುಂಬೆದಕೋಡಿ, ವೆಂಕಟರಮಣ ಭಟ್ ದೇರ್ಕಾಜೆ, ಪುಷ್ಪರಾಜ್ ರೈ ಕುರಿಯ ಏಳ್ನಾಡುಗುತ್ತು, ಶ್ರೀನಿವಾಸ ನಾಯ್ಕ ವಿಷ್ಣುನಗರ, ಚಂದ್ರಹಾಸ ರೈ ಡಿಂಬ್ರಿ, ರಂಗಪೂಜೆ ಸೇವಾಕರ್ಥರಾದ ಕೊರಗಪ್ಪ ರೈ ಡಿಂಬ್ರಿ, ಉದ್ಯಮಿ ಅರುಣ್ ಕುಮಾರ್ ರೈ ಡಿಂಬ್ರಿ, ವಿಜಯಲಕ್ಷ್ಮಿ ಆರ್ ರೈ ಬಳ್ಳಮಜಲು, ವಿಮಲ ವಿ.ಶೆಟ್ಟಿ ವಿಷ್ಣುನಗರ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು. ಅನ್ನಸಂತರ್ಪಣೆ ನಡೆಯಿತು.