ಪುತ್ತೂರು: ಜಲಾಲಿಯ ಯಂಗ್‌ಮೆನ್ಸ್ ಕೆಐಸಿ ಕುಂಬ್ರ ಇದರ ನೂತನ ಅಧ್ಯಕ್ಷರಾಗಿ ಅಶ್ರಫ್ ಸನ್‌ಶೈನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹರ್ಷದ್ ಕುಂಬ್ರ ಆಯ್ಕೆಯಾಗಿದ್ದಾರೆ. ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಉಪಾಧ್ಯಕ್ಷರಾಗಿ ಲತೀಫ್ ಎಂ.ಟಿ, ಕೋಶಾಧಿಕಾರಿಯಾಗಿ ಅಬ್ದುಲ್ಲ ಬೊಳ್ಳಾಡಿ ಹಾಗೂ ಜತೆ ಕಾರ್ಯದರ್ಶಿಯಾಗಿ ಡಿ.ಎ ಬಶೀರ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಫಾರೂಕ್ ಮಗಿರೆ, ರಫೀಕ್ ತ್ಯಾಗರಾಜೆ, ಹನೀಫ್ ಸನ್ಯಾಸಿಗುಡ್ಡೆ , ಎಚ್.ಎ ಇಕ್ಬಾಲ್ ಸಾರೆಪುಣಿ, ಶರೀಫ್ ಗಟ್ಟಮನೆ, ಕಾಸಿಂ ಕೆರೆಮೂಲೆ, ಇಲ್ಯಾಸ್ ಕುಂಬ್ರ, ಸಲಾಂ ಕುಂಬ್ರ, ಆಸೀಫ್ (ಆಚಿ), ಅಶ್ರಫ್ ಗಟ್ಟಮನೆ, ಹಾಸಿಮ್ ಹಾಗೂ ಅಶ್ರಫ್ ಸಾರೆಪುಣಿ ಅವರು ಆಯ್ಕೆಯಾಗಿದ್ದಾರೆ.
Home ಇತ್ತೀಚಿನ ಸುದ್ದಿಗಳು ಜಲಾಲಿಯ ಯಂಗ್‌ಮೆನ್ಸ್ ಕೆಐಸಿ ಕುಂಬ್ರ: ಅಧ್ಯಕ್ಷರಾಗಿ ಅಶ್ರಫ್ ಸನ್‌ಶೈನ್, ಪ್ರ.ಕಾರ್ಯದರ್ಶಿ ಹರ್ಷದ್ ಕುಂಬ್ರ