ನೆಲ್ಯಾಡಿ: ಕಾಂಚನ ವಿಕ್ರಂ ಯುವಕ ಮಂಡಲದ 2023-24ನೇ ವರ್ಷದ ವಾರ್ಷಿಕ ಮಹಾಸಭೆಯು ಜು.16ರಂದು ಯುವಕ ಮಂಡಲದ ಅಧ್ಯಕ್ಷ ಅನಿಲ್ ಪಿಂಟೋ ಪುಯಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮುಂದಿನ ಮೂರು ವರ್ಷಕ್ಕೆ ಹೊಸ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಅನಿಲ್ ಪಿಂಟೋ ಪುಯಿಲ, ಅಧ್ಯಕ್ಷರಾಗಿ ರಾಮಚಂದ್ರ ಕಾಂಚನ ಹಾಗೂ ಕಾರ್ಯದರ್ಶಿಯಾಗಿ ಗಿರೀಶ್ ಮುದ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯರಾಮ ಪದಕ, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಕಾಂಚನ, ಕೋಶಾಧಿಕಾರಿಯಾಗಿ ಸಚಿನ್ ಮುದ್ಯ, ಕ್ರೀಡಾ ಕಾರ್ಯದರ್ಶಿಯಾಗಿ ನವೀನ್ ಪುಯಿಲ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಚಂದ್ರಶೇಖರ ಸುದೆಕ್ಕಡ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮೋಹನ್ ಚಂದ್ರ ತೋಟದ ಮನೆ ಪದಕ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ಗೌಡತ್ತಿಗೆ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಬಾಲಕೃಷ್ಣ ನಾಯಿಲ, ಹೇಮಂತ್ ನೆಕ್ಕರೆ, ಪ್ರಶಾಂತ್ ಬಿದಿರಾಡಿ, ಮನೋಜ್ ಕುಮಾರ್ ಅಗರ್ತಿಮಾರ್, ಯತೀಶ್ ಪುಯಿಲರವರನ್ನು ಆಯ್ಕೆಮಾಡಲಾಯಿತು. ಹಿರಿಯರ ಸಲಹಾ ಸಮಿತಿಯ ಅಧ್ಯಕ್ಷರಾಗಿ ಮೋನಪ್ಪ ಪುಯಿಲ ಆಯ್ಕೆಯಾದರು.
ಸಭೆಯನ್ನು ಉದ್ದೇಶಿಸಿ ನಿರ್ಗಮಿತ ಅಧ್ಯಕ್ಷ ಅನಿಲ್ ಪಿಂಟೋ ಪುಯಿಲರವರು ಮಾತನಾಡಿ, ಕಳೆದ ಮೂರು ವರುಷದಿಂದ ಯುವಕ ಮಂಡಲದ ಏಳಿಗೆಗೆ ನನ್ನ ಜೊತೆ ಕೈಜೋಡಿಸಿದ ಯುವಕ ಮಂಡಲದ ಎಲ್ಲಾ ಹಿರಿಯ, ಕಿರಿಯ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಾಮಚಂದ್ರ ಕಾಂಚನ ಮಾತನಾಡಿ, ಮುಂದಿನ ದಿನಗಳಲ್ಲಿ ಯುವಕ ಮಂಡಲದಿಂದ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಲು ಎಲ್ಲಾ ಸದಸ್ಯರ ಸಹಕಾರ ಕೇಳಿದರು.
ಜೆಸಿಐ ಉಪ್ಪಿನಂಗಡಿ ಇದರ ನಿಕಟಪೂರ್ವ ಅಧ್ಯಕ್ಷ ಮೋಹನ್ ಚಂದ್ರ ತೋಟದ ಮನೆ ಅವರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಯುವಕ ಮಂಡಲ ಮಾಜಿ ಅಧ್ಯಕ್ಷ ಕುಶಾಲಪ್ಪ ಮುಖ್ಯ, ಮಾಜಿ ಕೋಶಾಧಿಕಾರಿ ಧನಂಜಯ ಪುಯಿಲ, ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಮುದ್ಯ, ನಿರ್ಗಮಿತ ಜೊತೆ ಕಾರ್ಯದರ್ಶಿ ತ್ಯಾಗರಾಜ್ ಕಾಂಚನ, ಸದಸ್ಯರಾದ ಎಲ್ಯಣ್ಣ ಶಿವಪುರ, ಜಗದೀಶ್ ಮಣಿಕ್ಕೆ, ನೇಮಣ್ಣ ಪದಕ, ಮಹೇಶ್ ಬಜತ್ತೂರು, ವಸಂತ ನೆಕ್ಕರೆ, ಶ್ರೇಯಸ್ ನಾಯಿಲ, ಚೇತನ್ ಪುಯಿಲ, ಚರಣ್ ಪುಯಿಲ, ವಸಂತ ಕಾಂಚನ, ಕೌಶಿಕ್ ಪುಯಿಲ ಉಪಸ್ಥಿತರಿದ್ದರು. ನಿರ್ಗಮಿತ ಕಾರ್ಯದರ್ಶಿ ಉಮೇಶ್ ಕಾಂಚನ ವರದಿ ವಾಚಿಸಿದರು. ಸಚಿನ್ ಮುದ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಗಿರೀಶ್ ಮುದ್ಯ ವಂದಿಸಿದರು.