ಮುಂಡೂರು ಶಾಲೆಯಲ್ಲಿ ಪೋಷಕರ ಸಭೆ

0

ಪುತ್ತೂರು: ಪೋಷಕರು ಹಾಗೂ ಶಿಕ್ಷಕರು ಸಮಾನ ಮನಸ್ಸಿನಿಂದ ಸ್ಪಂದಿಸಿದಾಗ ಮಾತ್ರ ಒಂದು ಶಾಲೆಯ ಅಭಿವೃದ್ಧಿಯಾಗುತ್ತದೆ. ಅಂತಹ ಉತ್ತಮ ಬಾಂಧವ್ಯ ಮುಂಡೂರು ಶಾಲೆಯಲ್ಲಿ ಇದೆ ಎಂದು ಮುಂಡೂರು ಸ.ಉ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ಹೇಳಿದರು.
ಮುಂಡೂರು ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿ ವರ್ಷದ ಪ್ರಥಮ ಪೋಷಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಮನಿರ್ದೇಶಿತ ಸದಸ್ಯ ಉಮೇಶ್ ಗೌಡ ಅಂಬಟ ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ಸಮಗ್ರ ವಿವರಗಳನ್ನು ಪ್ರಾಸ್ತಾವಿಕ ಮಾತುಗಳ ಮೂಲಕ ಶಾಲಾ ಮುಖ್ಯಗುರು ವಿಜಯಾ ಪಿ ಪೋಷಕರ ಮುಂದಿಟ್ಟರು. ಎಸ್‌ಡಿಎಂಸಿಗೆ ತೆರವಾದ ಸದಸ್ಯರುಗಳ ಆಯ್ಕೆ ಪ್ರಕ್ರಿಯೆಯನ್ನು ಇದೇ ವೇಳೆ ಮಾಡಲಾಯಿತು. ಅದನ್ನು ಶಾಲಾ ಸಹ ಶಿಕ್ಷಕ ಅಬ್ದುಲ್ ಬಶೀರ್ ಕೆ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವನಿತ ಬಿ ಅವರು ಮಾತೆಯ ಸಂಘದ ರಚನಾ ಕಾರ್ಯವನ್ನು ಹಾಗೂ ಟಿಜಿಟಿ ಶಿಕ್ಷಕರಾದ ರವೀಂದ್ರ ಶಾಸ್ತ್ರಿ ಅವರು ಸುರಕ್ಷತಾ ಕಾರ್ಯದ ಬಗ್ಗೆ ವಿವರಣೆಯನ್ನು ನೀಡಿ ಶಾಲಾ ಸುರಕ್ಷತಾ ತಂಡದ ಪುನರ್ರಚನಾ ಕಾರ್ಯವನ್ನು ನೆರವೇರಿಸಿದರು.
ಶಾಲಾ ಜಿಪಿಟಿ ಶಿಕ್ಷಕಿ ಸಂಧ್ಯಾ ಸ್ವಾಗತಿಸಿದರು. ಸಹಶಿಕ್ಷಕಿ ನಾಗವೇಣಿ ವಂದಿಸಿದರು. ಶಿಕ್ಷಕಿ ಶಶಿಕಲಾ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here