ದೂಮಡ್ಕ: ಪದ್ಮಶ್ರೀ ನೂತನ ಸ್ವಸಹಾಯ ಸಂಘ ಉದ್ಘಾಟನೆ

0

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇದರ ಮಾರ್ಗದರ್ಶನದಲ್ಲಿ ಬೆಟ್ಟಂಪಾಡಿ ವಲಯದ ದೂಮಡ್ಕ ಪೇರಲ್ತಡ್ಕ ಕಾರ್ಯಕ್ಷೇತ್ರದಲ್ಲಿ ಶ್ರೀ ಪದ್ಮಶ್ರೀ ಹೆಸರಿನ ನೂತನ ಸ್ವಸಹಾಯ ಸಂಘ ಉದ್ಘಾಟಿಸಲಾಯಿತು. ಒಕ್ಕೂಟದ ಬೆಟ್ಟಂಪಾಡಿ ವಲಯಾಧ್ಯಕ್ಷ  ಬಾಲಕೃಷ್ಣ ಪೇರಲ್ತಡ್ಕ ಉದ್ಘಾಟಿಸಿ ಶುಭ ಹಾರೈಸಿದರು.

ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ ಸಂಘದ ವ್ಯವಹಾರ ಮತ್ತು ಯೋಜನೆಯ ನೀತಿ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು. ಸೇವಾ ಪ್ರತಿನಿಧಿ ಲೀಲಾವತಿ ಡಿ ಉಪಸ್ಥಿತರಿದ್ದರು. ಸಂಘದಲ್ಲಿ 10 ಜನ ಸದಸ್ಯರಿದ್ದು, ಪ್ರಬಂಧಕರಾಗಿ ಗಣೇಶ್ ಭಟ್, ಸಂಯೋಜಕರಾಗಿ ಶಶಿಕಲ, ಕೋಶಾಧಿಕಾರಿಯಾಗಿ  ಬಾಬು ಇವರು ಆಯ್ಕೆಯಾದರು.

LEAVE A REPLY

Please enter your comment!
Please enter your name here