ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಮತ್ತು ಸುಳ್ಯ ವರ್ತಕ ಸಂಘದ ವತಿಯಿಂದ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಸನ್ಮಾನ

0

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ ಮತ್ತು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ಯನ್ನು ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ವಹಿಸಿದ್ದರು.

ಪಿ. ಬಿ. ಹರೀಶ್ ರೈ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 70 ವರ್ಷದ ಇತಿಹಾಸದಲ್ಲಿ 10 ನೇ ಮಹಿಳಾ ಶಾಸಕಿಯಾಗಿ ಇತಿಹಾಸ ನಿರ್ಮಿಸಿದವರು ಭಾಗೀರಥಿ ಮುರುಳ್ಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಭಾಗೀರಥಿ ಮುರುಳ್ಯ ಅವರು ಮಾತನಾಡಿ ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ವಪ್ರಯತ್ನವನ್ನು ಮಾಡುವೆನು ಎಂದು ಹೇಳಿದರು.

ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪಟ್ಟೆ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ನೆಹರು ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ, ವರ್ತಕರ ಸಂಘದ ಕಾರ್ಯದರ್ಶಿ ಗಿರೀಶ್ ದೆಂಗೋಡಿ, ರೆಡ್ ಕ್ರಾಸ್ ಕಾರ್ಯದರ್ಶಿ ತಿಪ್ಪೇಶಪ್ಪ, ರೆಡ್ ಕ್ರಾಸ್ ಉಪಸಭಾಪತಿ ಕೆ. ಎಂ.ಮುಸ್ತಫ, ಮಾಜಿ ಜಿ.ಪಂ.ಸದಸ್ಯ ಎಸ್ ಎನ್ ಮನ್ಮಥ, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ವರ್ತಕ ಸಂಘದ ಉಪಾಧ್ಯಕ್ಷ ಹಮೀದ್ ಜನತಾ, ರಾಮಚಂದ್ರ ಭಾರತ್ ಆಗ್ರೋ, ರೆಡ್ ಕ್ರಾಸ್ ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್, ಪ್ರಮೀಳಾ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here