ಕೋಡಿಂಬಾಡಿ ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಮಿತ್ತಳಿಕೆ ನಿಧನ

0

ಪುತ್ತೂರು:ಕೋಡಿಂಬಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸ್ಥಾಪಕಾಧ್ಯಕ್ಷ, ಕೋಡಿಂಬಾಡಿ ಮಿತ್ತಳಿಕೆ ನಿವಾಸಿ ಪ್ರಕಾಶ್ ಕುಮಾರ್ ಜೈನ್(65ವ.)ರವರು ಅಲ್ಪ ಕಾಲದ ಅಸೌಖ್ಯದಿಂದ ಜು.19ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಮಾ ಸಲಹೆಗಾರರು ಆಗಿರುವ ಪ್ರಕಾಶ್ ಕುಮಾರ್ ಜೈನ್‌ರವರು ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಶೋಭಾ ಎಸ್. ಜೈನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here