ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ನಬಾರ್ಡ್ ಅಧ್ಯಯನ ತಂಡ ಭೇಟಿ

0

ವಿಟ್ಲ: ಭಾರತದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ದಿಗೆ ಬರ್ಡ್ (BIRD) ವತಿಯಿಂದ ಪ್ರಮುಖ ಮೂರು ತರಬೇತಿ ಕೇಂದ್ರಗಳಿದ್ದು ಇವುಗಳಲ್ಲಿ ನಮ್ಮ ಜಿಲ್ಲೆಯ ಮಂಗಳೂರಿನಲ್ಲಿ ಒಂದು ಕೇಂದ್ರವಿದೆ. ಇಲ್ಲಿ ಕೇರಳ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಹಾಗೂ ಪ್ರಭಂಧಕರ ಮೂರು ದಿನಗಳ ತರಬೇತಿ ಕಾರ್ಯ ನಡೆಯುತಿದ್ದು ಇದರ ಅಂಗವಾಗಿ ಜಿಲ್ಲೆಯ ಪ್ರಮುಖ ಸಹಾಕಾರಿ ಸಂಘಗಳ ಭೇಟಿ ಹಾಗೂ ಅಧ್ಯಯನ ಕಾರ್ಯಕ್ರಮದಂತೆ ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಒಂದು ತಂಡ ಭೇಟಿ ನೀಡಿತು.

ನಬಾರ್ಡ್ ಡಿ.ಜಿ.ಯಂಗಳಾದ ಸಂಜೀವಿ ಹಾಗೂ ಸಂಧ್ಯಾ ನಾಗೇಶ್ ನೇತೃತ್ವದಲ್ಲಿ 32 ಜನರ ತಂಡ ಸಂಘದ ವಿವಿಧ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ಸಂಘದ ಅಭಿವೃದ್ದಿಯ ವಿವಿಧ ಹಂತಗಳ ವಿವರ ನೀಡಿ ವಂದಿಸಿದರು.

LEAVE A REPLY

Please enter your comment!
Please enter your name here