ಪುತ್ತೂರು: ಅಸಹಾಯಕ ಪರಿಸ್ಥಿತಿಯಲ್ಲಿರುವ ಕಾಣಿಯೂರಿನ ಜಾನಕಿ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ `ವಾತ್ಸಲ್ಯ’ ಮನೆಯನ್ನು ನಿರ್ಮಿಸಿಕೊಡುವ ಕಾರ್ಯ ನಡೆಯುತ್ತಿದ್ದು ಆ ಪ್ರಯುಕ್ತ ಆಲಂಕಾರು ಶೌರ್ಯ ಘಟಕದ ವತಿಯಿಂದ ಶ್ರಮದಾನ ಮಾಡಲಾಯಿತು. ಆಲಂಕಾರು ಶೌರ್ಯ ಘಟಕದ ಸದಸ್ಯರಾದ ಹರೀಶ, ಸವಿತಾ, ಕೇಶವ, ಪ್ರಕಾಶ್, ಸುರೇಶ, ಮುರಳಿ, ಗುಣಪಾಲ, ಭವ್ಯ, ಕವಿತಾ, ಶಾಂಭವಿ, ಶಶಿಧರ, ಪ್ರದೀಪ್, ಜಯಪ್ರಕಾಶ್, ಪೂರ್ಣಿಮಾ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ಕಾಣಿಯೂರು ಒಕ್ಕೂಟದ ಅಧ್ಯಕ್ಷರಾದ ಕುಸುಮಾಧರ, ಸವಣೂರು ಗ್ರಾ.ಪಂ ಅಧ್ಯಕ್ಷೆ ರಾಜೀವಿ ವಿ ಶೆಟ್ಟಿ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನ, ಆಲಂಕಾರು ಘಟಕದ ಸಂಯೋಜಕಿ ಸವಿತಾ ಉಪಸ್ಥಿತರಿದ್ದರು.