ಸಂಸ್ಕಾರ ಭಾರತಿ ಪುತ್ತೂರು ಘಟಕದ ವತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮ

0

ಪುತ್ತೂರು: ಸಂಸ್ಕಾರ ಭಾರತಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಘಟಕದ ವತಿಯಿಂದ ಜು.20ರಂದು ಗುರುಪೂರ್ಣಿಮೆಯ ಅಂಗವಾಗಿ ಯಕ್ಷಗಾನ ವಸ್ತ್ರಾಲಂಕಾರ ಮತ್ತು ಮುಖ ವರ್ಣಿಕೆಯ ಹಿರಿಯ ಕಲಾವಿದರಾದ ಕೆದಂಬಾಡಿ ಮಠ ಆನಂದ ರೈ ಅವರನ್ನು ಅವರ ಸ್ವಗೃಹದಲ್ಲಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವಿದುಷಿ ಪ್ರೀತಿಕಲಾ ಅವರು ಧ್ಯೇಯಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ವಿದುಷಿ ನಯನ ವಿ. ರೈ ದೀಪ ಬೆಳಗಿಸಿ ಉದ್ಘಾಟಿಸಿ, ಅತಿಥಿಗಳನ್ನು ಪರಿಚಯಿಸಿದರು. ಪದ್ಮಾ ಆಚಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕಾರ ಭಾರತಿ, ಸಂಯೋಜಕರಾದ ವಿದ್ವಾನ್ ದೀಪಕ್ ಕುಮಾರ್ ಸನ್ಮಾನ ಪತ್ರವನ್ನು ವಾಚಿಸಿದರು. ಜಿಲ್ಲಾ ಉಪಾಧ್ಯಕ್ಷೆ ರೂಪಲೇಖ ಶಾಲು ಹೊದಿಸಿ, ಫಲ ತಾಂಬೂಲಗಳನ್ನಿತ್ತು, ಸನ್ಮಾನ ಪತ್ರವನ್ನು ನೀಡಿ ಆನಂದ ರೈ ಅವರನ್ನು ಸನ್ಮಾನಿಸಿದರು. ಶಂಕರಿ ಶರ್ಮ ಧನ್ಯವಾದ ಸಮರ್ಪಿಸಿದರು. ಸನ್ಮಾನ ಸ್ವೀಕರಿಸಿದ ಮಠ ಆನಂದ ರೈ, ಅವರ ಪುತ್ರ ಪವನ್ ರಾಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಪುತ್ತೂರು ಘಟಕದ ಸದಸ್ಯರಾದ ವಿದ್ವಾನ್ ಗೋಪಾಲಕೃಷ್ಣ, ವಿದುಷಿ ಸ್ವಸ್ತಿಕಾ ಆರ್ ಶೆಟ್ಟಿ, ಆಶಾ ರಾವ್ , ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ರಾಜೇಶ್ ಮಜ್ಜರಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗ್ರಾಮ ಒಕ್ಕೂಟದ ಮೇಲ್ವಿಚಾರಕರು ಹಾಗೂ ಸೇವಾ ನಿರತರು, ಗುತ್ತು ರಘುನಾಥ ರೈ, ಜಯಕರ ರೈ ತಿಂಗಳಾಡಿ, ಚಂದ್ರಾವತಿ, ಕೆದಂಬಾಡಿ ಬೀಡು ಭಾಸ್ಕರ ಬಲ್ಲಾಳ ಮತ್ತು ತಾರಾ ಬಲ್ಲಾಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here