ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಜಯರಾಮ ರೈ ನುಳಿಯಾಲು ನಿಧನ

0

ಪುತ್ತೂರು:ವಿಜಯಾ ಬ್ಯಾಂಕ್(ಪ್ರಸ್ತುತ ಬ್ಯಾಂಕ್ ಆಫ್ ಬರೋಡ)ನ ನಿವೃತ್ತ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಜಯರಾಮ ರೈ ನುಳಿಯಾಲು(73ವ.)ರವರು ಅಸೌಖ್ಯದಿಂದ ಸೆ.11ರಂದು ಸಂಜೆ ನಿಧನ ಹೊಂದಿದರು.

ವಿಜಯಾ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಬಳಿಕ ಸಂಪ್ಯದಲ್ಲಿ ನುಳಿಯಾಲು ಫಾರ್ಮ್ಸ್‌ ನ ವಿಶ್ರಾಂತ ಜೀವನ ನಡೆಸುತ್ತಿದ್ದರು.ಕುರಿಯ ಗ್ರಾಮದ ಪಾಲಿಂಜೆ ಅಮ್ಮುಂಜ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಇವರು,ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷರಾಗಿ,ಪ್ರತಿಷ್ಠಿತ ಪಿ.ಎಚ್.ಎಫ್ ಪದವಿಗೆ ಭಾಜನರಾಗಿದ್ದರು.

ಬಂಟಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರೂ ಆಗಿದ್ದ ಇವರು ನುಳಿಯಾಲು ತರವಾಡು ಮನೆಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದರು, ಜೊತೆಗೆ ವಿವಿಧ ಸಂಘಸಂಸ್ಥೆಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು.

ಮೃತರು ಪುತ್ರ ಹರ್ಷಿತ್ ರೈ, ಸೊಸೆ ದಿಪಾಲಿ ರೈ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here