ರೈಲುಗಳಿಗೆ ಐತಿಹಾಸಿಕ ಸ್ಥಳ, ಮಹಾನ್ ವ್ಯಕ್ತಿಗಳ ನಾಮಕರಣಕ್ಕೆ ರೈಲ್ವೇ ಸಚಿವರಿಗೆ ಸಂಸದ ನಳಿನ್ ಮನವಿ

0

ಪುತ್ತೂರು:ಮಂಗಳೂರಿನಿಂದ ಹೊರಡುವ ಮತ್ತು ಮಂಗಳೂರಿಗೆ ಬರುವ ರೈಲುಗಳನ್ನು ಜನಸಾಮಾನ್ಯರು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳ ಅಥವಾ ಮಹಾನ್ ವ್ಯಕ್ತಿಗಳ ಹೆಸರನ್ನು ನಾಮಕರಣಗೊಳಿಸುವಂತೆ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರದ ರೈಲ್ವೇ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ರೈಲು ಸಂಖ್ಯೆ 16585/86ಗೆ ಮಂಗಳಾದೇವಿ ಎಕ್ಸ್ಪ್ರೆಸ್‌, ಬೆಂಗಳೂರು-ಕಣ್ಣೂರು 16511/12 ರೈಲಿಗೆ ರಾಣಿ ಅಬ್ಬಕ್ಕ ಎಕ್ಸ್ಪ್ರೆಸ್‌, ಮಡಗಾ0ವ್-ಮಂಗಳೂರು ಸೆಂಟ್ರಲ್ ರೈಲು 06601/02ಗೆ ಸೌಪರ್ಣಿಕ ಎಕ್ಸ್ಪ್ರೆಸ್‌, ಮಂಗಳೂರು ಸೆಂಟ್ರಲ್-ಕೊಯಮತ್ತೂರು ರೈಲು 22609/10ಗೆ ತುಳುನಾಡು ಇಂಟರ್‌ಸಿಟಿ ಎಕ್ಸ್ಪ್ರೆಸ್‌, ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ 12685/86ಗೆ ತೇಜಸ್ವಿನಿ ಎಸ್‌ಎಫ್ ಎಕ್ಸ್ಪ್ರೆಸ್‌, ಚೆನ್ನೈ ಎಗ್ಮೋರ್ ಮಂಗಳೂರು ಸೆಂಟ್ರಲ್ 16159/60 ರೈಲಿಗೆ ಚಂದ್ರಗಿರಿ ಎಕ್ಸ್ಪ್ರೆಸ್‌, ತ್ರಿವೇಂಡ್ರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ 16347/48ಗೆ ಕರಾವಳಿ ಎಕ್ಸ್ಪ್ರೆಸ್‌, ವಿಜಯಪುರ-ಮಂಗಳೂರು ಜಂಕ್ಷನ್ 07377/78ಗೆ ಹೇಮಾವತಿ ಎಕ್ಸ್ಪ್ರೆಸ್‌ ಹಾಗೂ ಮಂಗಳೂರು ಸೆಂಟ್ರಲ್-ಕಚೆಗುಡ್ಡ 17605/06 ರೈಲಿಗೆ ಫಲ್ಗುಣಿ ಎಕ್ಸ್ಪ್ರೆಸ್‌ ಎಂಬ ಹೆಸರುಗಳನ್ನಿಡುವಂತೆ ಸಂಸದ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿವೈಷ್ಣವ್ ಮತ್ತು ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೇ ಜನರಲ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರೆ.

LEAVE A REPLY

Please enter your comment!
Please enter your name here