





ಪುತ್ತೂರು: ನಗರದ ಹೃದಯ ಭಾಗದಲ್ಲಿರುವ ಪರ್ಲಡ್ಕ ಪಾಂಗಳಾಯಿ ಕಾರಣಿಕ ಕ್ಷೇತ್ರ ಶ್ರೀ ಮುಂಡ್ಯತ್ತಾಯ ದೈವಸ್ಥಾನದ ವಾರ್ಷಿಕ ಮಹಾಸಭೆಯು ನ.1ರಂದು ಶ್ರೀ ಮುಂಡ್ಯತ್ತಾಯ ಸಭಾಭವನದಲ್ಲಿ ಗೋಪಾಲಕೃಷ್ಣ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳಾದ ಪ್ರಶಾಂತ್ ಪಾಂಗಳಾಯಿ, ಜಯಶಂಕರ್ ರೈ, ಸೂರಪ್ಪ ಗೌಡ, ಸುಪ್ರಿತ ಸುನಿಲ್, ಕರುಣಾಕರ್ ಅಲೆಟ್ಟಿ ಇವರ ನೇತೃತ್ವದಲ್ಲಿ ನಡೆಯಿತು.



ಹಿರಿಯರಾದ ರಾಜ್ ಗೋಪಾಲ್ ಶಗ್ರಿತ್ತಾಯ, ಸುರೇಶ್ ನಾೖಕ್ ಕಲ್ಲಿಮಾರ್, ಮಹಾಲಿಂಗ ಮಣಿಯಾಣಿ, ರಮೇಶ್ ಅಚಾರ್ಯ, ಆನಂದ ಆಚಾರ್ಯ, ತಾರಾನಾಥ ರೈ, ಗಂಗಾಧರ ನಾೖಕ್, ಆನಂದ ಗೌಡ, ವಿನಯ ಭಂಡಾರಿ, ಸೀತಾರಾಮ ಅಚಾರ್ಯ, ಸರೋಜನಿ ಅಭಿಕಾರ್, ಸಂತೋಷ್ ಕುಮಾರ್ ಬೊನಂತಾಯ, ವರದರಾಜ್ ನಾಯಕ್, ಪ್ರವೀಣ್ ಪಾಂಗಳಾಯಿ, ಪುರುಷೊತ್ತಮ ನಾೖಕ್, ಕರುಣಾಕರ್ ಶೆಟ್ಟಿ, ಚಂದ್ರವಾತಿ,ನಳಿನಿ ಪ್ರಕಾಶ್, ವೀಣಾ ಅಚಾರ್ಯ, ಮುತ್ತು ಸ್ವಾಮಿ, ರವಿರಾಜ್ ಕಲ್ಲಿಮಾರ್, ಸುಜಾತ ನಾೖಕ್, ಪ್ರತಿಮಾ ಎಮ್, ಪ್ರದೀಪ್ ಪಾಂಗಳಾಯಿ, ವೀಕ್ಷಿತ್ ನಾೖಕ್ ಕಲ್ಲಿಮಾರ್, ಪರಮೇಶ್ವರ ನಾಯ್ಕ್, ಲಿಂಗಪ್ಪ ಗೌಡ ಕಲ್ಲಿಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆ ನೀಡಿದರು.






ನೂತನ ಪದಾಧಿಕಾರಿಗಳ ಆಯ್ಕೆ:
ದೈವಸ್ಥಾನದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯ್ಕ್, ಉಪಾಧ್ಯಕ್ಷರಾಗಿ ವೀಕ್ಷಿತ್ ನಾೖಕ್ ಕಲ್ಲಿಮಾರ್, ಕಾರ್ಯದರ್ಶಿಯಾಗಿ ಸರೋಜಿನಿ ಅಭಿಕಾರ್, ಜೊತೆ ಕಾರ್ಯದರ್ಶಿಯಾಗಿ ಕರುಣಾಕರ್ ಶೆಟ್ಟಿ, ಖಜಾಂಜಿಯಾಗಿ ಜಯಶಂಕರ್ ರೈ, ಜೊತೆ ಖಜಾಂಜಿಯಾಗಿ ಲಿಂಗಪ್ಪ ಗೌಡ ಕಲ್ಲಿಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಆನಂದ ಗೌಡ ಸಹಕರಿಸಿದರು.









