ಪರ್ಪುಂಜ ರಸ್ತೆ ಬದಿಯ ಖಾಸಗಿ ಜಾಗದಲ್ಲಿ ತ್ಯಾಜ್ಯಗಳ ರಾಶಿ…!

0

ಸ್ಥಳೀಯರಲ್ಲಿ ರೋಗ ಹರಡುವ ಭೀತಿ-ತ್ಯಾಜ್ಯ ತೆರವುಗೊಳಿಸುವಂತೆ ಆಗ್ರಹ

ಪುತ್ತೂರು: ಒಳಮೊಗ್ರು ಗ್ರಾ.ಪಂ ವ್ಯಾಪ್ತಿಯ ಪರ್ಪುಂಜ ರಸ್ತೆ ಬದಿಯ ಖಾಸಗಿ ಜಾಗವೊಂದರಲ್ಲಿ ತ್ಯಾಜ್ಯಗಳ ರಾಶಿ ಕಂಡು ಬಂದಿದ್ದು ಸ್ಥಳೀಯವಾಗಿ ಇದು ಭಾರೀ ಸಮಸ್ಯೆಗೆ ಕಾರಣವಾಗಿದೆ. ಪರ್ಪುಂಜ ಪೇಟೆಯ ಅನತಿ ದೂರದಲ್ಲಿ ರಸ್ತೆ ಬದಿಯಲ್ಲಿರುವ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗದಲ್ಲಿ ಯಾರೋ ರಾತ್ರಿ ವೇಳೆ ತಂದು ತ್ಯಾಜ್ಯ ಸುರಿದು ಹೋಗುತ್ತಿದ್ದು ಸ್ಥಳೀಯವಾಗಿ ರೋಗ ಹರಡುವ ಭೀತಿ ಜನರನ್ನು ಕಾಡುತ್ತಿದೆ. ಮುಖ್ಯವಾಗಿ ಒಣ ಕಸ ಹಾಗೂ ಹಸಿ ಕಸ ಎರಡನ್ನೂ ಇಲಿ ತಂದು ಸುರಿಯಲಾಗುತ್ತಿದ್ದು ರಾಜಾರೋಷವಾಗಿ ತಂದು ಸ್ಥಳದಲ್ಲಿ ತ್ಯಾಜ್ಯ ಎಸದು ಹೋಗುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತ್ಯಾಜ್ಯವನ್ನು ತೆರವುಗೊಳಿಸಿ ಮುಂದಕ್ಕೆ ಅಲ್ಲಿ ತ್ಯಾಜ್ಯ ಎಸೆಯದಂತೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗದೆ. ಇದು ಸರಕಾರಿ ವೈದ್ಯರೊಬ್ಬರಿಗೆ ಸೇರಿದ ಜಾಗ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಮಗೆ ಸಮಸ್ಯೆಯಾಗಿದೆ-ಜಬ್ಬಾರ್
ರಸ್ತೆ ಬದಿಯಲ್ಲಿರುವ ಜಾಗದಲ್ಲಿ ತ್ಯಾಜ್ಯ ತಂದು ಹಾಕುವುದರಿಂದ ಪರಿಸರ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದ್ದು ರೋಗ ಹರಡುವ ಭೀತಿ ಎದುರಾಗಿದೆ. ಇದು ಈ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಪ್ರಸ್ತುತ ಬಂಟ್ವಾಳದಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ಅಶೋಕ್ ರೈ ಅವರಿಗೆ ಸೇರಿದ ಜಾಗವಾಗಿದ್ದು ಅವರಲ್ಲಿ ಜಾಗಕ್ಕೆ ಬೇಲಿ ಹಾಕುವಂತೆ ಕೇಳಿಕೊಂಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯರೂ ಆಗಿರುವ ಜಬ್ಬಾರ್ ಸಂಪ್ಯ ತಿಳಿಸಿದ್ದಾರೆ. ಆ ಜಾಗದಲ್ಲಿ ಸಾರ್ವಜನಿಕರು ನಾನಾ ರೀತಿಯ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದು ಸಂಬಂಧಪಟ್ಟವರು ಯಾರಿಗೂ ಕೂಡಾ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಮುಂದಕ್ಕೂ ಇದೇ ಪರಿಸ್ಥಿತಿ ಮುಂದುವರಿದರೆ ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here