ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ

0

ರೂ.33.71 ಕೋಟಿ ವ್ಯವಹಾರ, ರೂ.23.69 ಲಕ್ಷ ಲಾಭ, ಶೇ.10 ಡಿವಿಡೆಂಡ್

ಪುತ್ತೂರು: ಪಡೀಲು ಬಾಳಪ್ಪ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿರೂ.33.71 ಕೋಟಿ ವ್ಯವಹಾರ ಮಾಡಿ ರೂ.23.69 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಮಹಾಸಭೆಯು ಜು.22ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವರದಿ ವರ್ಷದಲ್ಲಿ ಸಂಘವು 310 ಸದಸ್ಯರಿಂದ ರೂ. 5,33,042 ಪಾಲು ಬಂಡವಾಳ ಹೊಂದಿರುತ್ತದೆ. ರೂ.5,31,70,295.96 ವಿವಿಧ ರೂಪದ ಠೇವಣಿ, ರೂ. 1,30,09,311.95 ಕ್ಷೇಮ‌ ನಿಧಿ, ರೂ.15,000 ಇತರ ಸಹಕಾರಿ ಸಂಘದಲ್ಲಿ ಪಾಲು ಬಂಡವಾಳ ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ರೂ.1,14,37,071, ಮೂರ್ತೆದಾರರ ಮಹಾಮಂಡಲದಲ್ಲಿ ರೂ.85,760, ಇಡ್ಕಿದು ಸೇವಾ ಸಹಕಾರಿ ಸಂಘದ ಕಬಕ ಶಾಖೆಯಲ್ಲಿ ರೂ.5,00,000 ಹಾಗೂ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಕಬಕ ಶಾಲೆಯಲ್ಲಿ ರೂ.13,00,000 ಠೇವಣಿ ಹೂಡಿಕೆ ಮಾಡಲಾಗಿದೆ. ರೂ.5,80,19,067 ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ ಎಂದ ಅವರು ಸಂಘದ ನಿವೇಶನ ನೋಂದಾವಣೆ ಯ ಕಾರ್ಯವು ಅಂತಿಮ ಹಂತದಲ್ಲಿದೆ ಎಂದರು.


ಬಿ.ಸಿ. ರೋಡ್ ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಮೂರ್ತೆದಾರಿಕೆ ಇಲ್ಲದಿದ್ದರೂ ಸಮಾಜ ಬಾಂಧವರ ಮೂಲಕ ಸಹಕಾರಿ ಸಂಘವು ವ್ಯವಸ್ಥಿತವಾಗಿ ಮುಂದುವರಿಯುತ್ತದೆ. ಸಹಕಾರಿ ಸಂಘ ದಲ್ಲಿ ಭ್ರಷ್ಟಾಚಾರ ಇಲ್ಲದೆ ಸ್ವಯಂಪ್ರೇರಿತವಾಗಿ ಸಂಘವನ್ನು ಬೆಳೆಸಲಾಗುತ್ತದೆ. ಯುವಕರನ್ನು ಸಹಕಾರ ಸಂಘದಲ್ಲಿ ತೊಡಗಿಸಿಕೊಂಡು ಬಲಿಷ್ಠ ಗೊಳಿಸಬೇಕು ಎಂದರು.


ಉಷಾ ಅಂಚನ್ ಮಾತನಾಡಿ, ಆಡಳಿತ ಮಂಡಳಿಯ ಉತ್ತಮ ಕಾರ್ಯದಿಂದಾಗಿ ಯಾವುದೇ ಗೊಂದಲವಿಲ್ಲದೆ ಮಹಾಸಭೆ ನಡೆಯುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿಯೂ ಸಂಘ ರೂ.23ಲಕ್ಷ ಲಾಭ ಗಳಿಸಿರುವುದನ್ನು ಶ್ಲಾಘಿಸಿದರು.


ಸನ್ಮಾನ:
ಸಂಘದ ಹಿರಿಯ ಮೂರ್ತೆದಾರರಾದ ಬೇಬಿ ಸುವರ್ಣ ಮೋರಿಬೆಟ್ಟು ಪುಣಚರವರನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ವಾಸಪ್ಪ ಪೂಜಾರಿ ಮೇಗಿನಪಂಜರವರನ್ನು ಸಭೆಯ ಬಳಿಕ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು. ಪಿಗ್ಮಿ‌ಸಂಗ್ರಾಹಕರಾದ ಸತೀಶ್ ಆರ್., ಭಾಸ್ಕರ್ ಕೆ., ದಿನೇಶ್ ಕೆ., ಶಿವಪ್ರಸಾದ್ ಹಾಗೂ ಗಣೇಶ್ ಬಿ. ಯವರಿಗೆ ಆರ್ಥಿಕ ಧನ ಸಹಾಯ ನೀಡಿ ಗೌರವಿಸಲಾಯಿತು.


ಉಪಾಧ್ಯಕ್ಷ ಬಿ.ಕೆ ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಶಯನಾ ಜಯಾನಂದ ಕೋಡಿಂಬಾಡಿ, ಜಯಲಕ್ಷ್ಮಿ ಸುರೇಶ್ ಕೇಪುಳು, ಜಿನ್ನಪ್ಪ ಪೂಜಾರಿ ಮುರ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕರಾದ ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು ಸ್ವಾಗತಿಸಿದರು. ಚಂದಪ್ಪ ಪೂಜಾರಿ ಕಾಡ್ಲ ಸನ್ಮಾನಿತರ ಪರಿಚಯ ಮಾಡಿದರು. ಪದ್ಮಪ್ಪ ಪೂಜಾರಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಎ. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಪಿಗ್ಮಿ ಸಂಗ್ರಾಹಕ ದಿನೇಶ್ ಪ್ರಾರ್ಥಿಸಿದರು. ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳಾದ ಆದರ್ಶ ಹಾಗೂ ಸವಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಗ್ಮಿ ಸಂಗ್ರಾಹಕರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.

LEAVE A REPLY

Please enter your comment!
Please enter your name here