ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆ

0

ಕಾಣಿಯೂರು: ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪುಣ್ಚತ್ತಾರು ಶ್ರೀಹರಿ ಸಭಾಭವನದಲ್ಲಿ ನಡೆಯಲಿರುವ 6ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯು ಜು .23ರಂದು ಪುಣ್ಚತ್ತಾರಿನ ಶ್ರೀಹರಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪುಣ್ಚತ್ತಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ರೈ ಮಾಳ, ಉಪಾಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು, ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಕೋಶಾಧಿಕಾರಿ ನೇಮಿರಾಜ್ ಕಡೀರ, ಜತೆ ಕಾರ್ಯದರ್ಶಿ ದಿನೇಶ್ ಪೈಕ, ಶ್ರೀಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಇಡ್ಯಡ್ಕ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here