25 ನೇ ಅಂತರಾಷ್ಟ್ರೀಯ ಜಾಂಬೂರಿ- ಇಂದ್ರಪ್ರಸ್ಥ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಇಬ್ಬರು ಶಿಕ್ಷಕಿಯರು ದಕ್ಷಿಣ ಕೊರಿಯಾಕ್ಕೆ

0

ಉಪ್ಪಿನಂಗಡಿ: ದೇಶಗಳ ಸಂಸ್ಕ್ರತಿಯನ್ನು ಬಿಂಬಿಸುವ ನಿಟ್ಟಿನಲ್ಲಿ Draw your Dream ಎಂಬ ಧ್ಯೇಯದೊಂದಿಗೆ ಆ. 1 ರಿಂದ ಆ.12 ರವರೆಗೆ ದಕ್ಷಿಣ ಕೊರಿಯದ ಸೀಮನ್‌ಗಾಮ್ ಜಿಯಾಲ್ಲಾಬುಕ್ (Saemangeum Jeollabuk – do) ಎಂಬಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಜಾಂಬೂರಿಗೆ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ಐವರು ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕಿಯರು ಆಯ್ಕೆಗೊಂಡಿದ್ದಾರೆ.

ಜುಲೈ 31 ಕ್ಕೆ ಮಂಗಳೂರಿನಿಂದ 48 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರು ಬೆಂಗಳೂರು ಮತ್ತು ಹಾಂಕಾಂಗ್ ಮೂಲಕ ಸೌತ್ ಕೊರಿಯಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಸಂಸ್ಥೆಯಿಂದ ಭಾಗವಹಿಸಲಿರುವ ವಿದ್ಯಾರ್ಥಿಗಳು ಮೈನಾಶ್ರೀ ಯಂ. ಜಿ (ಗಣೇಶ ಎಂ.ಜಿ ಹಾಗೂ ಕೆ. ಸಿ ಜಯಶ್ರೀ ಇವರ ಪುತ್ರಿ), ಶಹರಿ (ದಿ| ಸುರೇಶ್
ಮತ್ತು ರೂಪಾ ಎನ್ ರವರ ಪುತ್ರಿ ) , ಪಿ. ವಿ. ವಿಧಿಶಾ (ಪಿ. ವಿ ವೆಂಕಟ್ರಮಣ ಭಟ್ ಮತ್ತು ಮಲ್ಲಿಕಾ ಐ ರವರ ಪುತ್ರಿ), ಸೃಜನಾ ಸಿ. ಟಿ ( ಚೇತನ್ ಆನೆಗುಂಡಿ ಮತ್ತು ದಿವ್ಯಾ ಚೇತನ್ ರವರ ಪುತ್ರಿ) ಅವನೀಶ ಕೆ (ನಟರಾಜ ಕೈಲಾರ್ ಮತ್ತು ವಿದ್ಯಾ ಶಾರದ ಕೈಲಾರ್‌ರವರ ಪುತ್ರ), ಹಾಗೂ ಶಿಕ್ಷಕಿಯರು ರೇಣುಕಾ (ಶ್ರೀಯುತ ಶಿವಪ್ರಸಾದ್‌ರವರ ಪತ್ನಿ), ಹರ್ಷಿತಾ (ಶ್ರೀಯುತ ಚೇತನ್‌ರವರ ಪತ್ನಿ), ಹಳೆ ವಿದ್ಯಾರ್ಥಿಗಳಾದ ಮೊಹಮ್ಮದ್ ಸೈಫುದ್ದೀನ್ (ಅಬ್ದುಲ್ ಖಾದರ್ ಕೆ ಮತ್ತು ಸೆಲಿಕಾ ಬಿಬಿ ಇವರ ಪುತ್ರ) ಹಾಗೂ ವೈಭವ್ ಪ್ರಭು (ರವೀಂದ್ರ ಪ್ರಭು ಮತ್ತು ರಕ್ಷಿತಾ ಪ್ರಭು ರವರ ಪುತ್ರ) ಇವರು ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗವಹಿಸಲಿದ್ದರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here