ನಿಡ್ಪಳ್ಳಿ; ಪಾಣಾಜೆ ಗ್ರಾಮದ ಕೀಲಂಪಾಡಿ ಎಂಬಲ್ಲಿ ಅಣ್ಣು ಎಂಬವರ ಮನೆಯ ಮಾಡಿಗೆ ಜು.24 ರಂದು ಬೀಸಿದ ಗಾಳಿಗೆ ತೆಂಗಿನ ಮರ ಮತ್ತು ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.ಮಾಡಿನ ಮೂಲೆಯ ಸ್ವಲ್ಪ ಭಾಗದ ಹಂಚು ಹುಡಿಯಾಗಿ ಅಣ್ಣುರವರ ತಲೆಗೆ ಬಿದ್ದ ಪರಿಣಾಮ ಅಲ್ಪ ಸ್ವಲ್ಪ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ವಿಷಯ ತಿಳಿದು ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿ ಒಳಗೆ ನೀರು ಬೀಳದಂತೆ ಪ್ಲಾಸ್ಟಿಕ್ ಹೊದಿಸಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಿದರು. ತಾಲೂಕು ವಿಪತ್ತು ನಿರ್ವಹಣಾ ತಂಡದ ಮಾಸ್ಟರ್ ಮನೋಜ್ ಸುವರ್ಣ, ಕ್ಯಾಪ್ಟನ್ ಸುರೇಶ್, ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕಿ ಪದ್ಮಾವತಿ. ಡಿ ಹಾಗೂ ತಂಡದ ಸದಸ್ಯರು ತೆರವು ಕಾರ್ಯ ನಿರ್ವಹಿಸಿದರು.ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ ಸ್ಥಳಕ್ಕೆ ಭೇಟಿ ನೀಡಿದ್ದರು.
ರಸ್ತೆಗೆ ಬಿದ್ದ ಮರ ತೆರವು
ಪಾಣಾಜೆ ಕೀಲಂಪಾಡಿಯಲ್ಲಿ ಮನೆಗೆ ಬಿದ್ದ ತೆಂಗಿನ ಮರ ತೆರವು ಗೊಳಿಸಿ ಹಿಂತಿರುಗುವಾಗ ಬೆಟ್ಟಂಪಾಡಿ ಪಾಣಾಜೆ ರಸ್ತೆಯ ಗುತ್ತು ಎಂಬಲ್ಲಿ ರಸ್ತೆ ಮೇಲೆ ಅಡ್ಡ ಬಿದ್ದ ಮರವನ್ನು ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಟ್ಟರು.