ಕುಂಡಾಜೆ ಶಾಲೆಯ ಶಿಕ್ಷಕ ನಾರಾಯಣ ಪಿ.ಎಸ್.ವಳಕಡಮ ಶಾಲೆಗೆ ವರ್ಗಾವಣೆ

0

ರಾಮಕುಂಜ: ರಾಮಕುಂಜ ಗ್ರಾಮದ ಕುಂಡಾಜೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 2003ರಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾರಾಯಣ ಪಿ.ಎಸ್.ಅವರು ಕೊಯಿಲ ಗ್ರಾಮದ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು ಜು.20ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.


ಕುಂಡಾಜೆ ಶಾಲೆಯಲ್ಲಿ ಸುಮಾರು 20 ವರ್ಷ ಕರ್ತವ್ಯ ನಿರ್ವಹಿಸಿದ ನಾರಾಯಣ ಪಿ.ಎಸ್.ರವರು ಸ್ಥಳೀಯ ಸಂಘಟನೆಗಳು, ದಾನಿಗಳು ಮತ್ತು ಸರಕಾರದ ವಿವಿಧ ಯೋಜನೆಗಳ ಮೂಲಕ ಹಲವಾರು ಮೂಲಭೂತ ಸೌಲಭ್ಯಗಳನ್ನು ಶಾಲೆಗೆ ಪಡೆಯುವಲ್ಲಿ ಪ್ರಯತ್ನಿಸಿದ್ದರು. ಶೌಚಾಲಯ, ಆಟದ ಮೈದಾನ ವಿಸ್ತರಣೆ, ಬಯಲು ರಂಗಮಂಟಪ, ಶುದ್ಧ ಕುಡಿಯುವ ನೀರಿನ ಘಟಕ, ಹಣ್ಣಿನ ಗಿಡ, ಅಡಿಕೆ ತೋಟ ನಿರ್ಮಾಣ, ದೂರದರ್ಶನ, ಸೋಲಾರ್‌ದೀಪ, ಧ್ವನಿವರ್ಧಕ, ಕಂಪ್ಯೂಟರ್, ಪ್ರಿಂಟರ್, ಗ್ರಂಥಾಲಯಗಳಿಗೆ ಪುಸ್ತಕ, ಚಪ್ಪಲಿ ಸ್ಟ್ಯಾಂಡ್, ಬಟ್ಟಲುಸ್ಟ್ಯಾಂಡ್, ಇನ್‌ವರ್ಟರ್, ಮಿಕ್ಸಿ, ಗ್ರೈಂಡರ್, ತರಗತಿ ಕೊಠಡಿಗಳ ದುರಸ್ತಿ, ಟೈಲ್ಸ್ ಅಳವಡಿಕೆ ಸೌಲಭ್ಯಗಳನ್ನು ಶಾಲೆಗೆ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದರು. 4 ಸಲ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ, ಶಾಲಾ ಶೈಕ್ಷಣಿಕ ಪ್ರವಾಸ, ಶಾಲಾ ಸುವರ್ಣ ಮಹೋತ್ಸವ ಆಚರಣೆ ಇವರ ನೇತೃತ್ವದಲ್ಲಿ ನಡೆದಿತ್ತು. ಕವಿಗಳೂ ಆಗಿರುವ ನಾರಾಯಣ ಪಿ.ಎಸ್.ಅವರು ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದು ಶಾಲಾ ಮಕ್ಕಳು ನವೋದಯ ಶಾಲೆ, ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಆಯ್ಕೆ ಆಗುವಲ್ಲಿಯೂ ಪ್ರಯತ್ನಿಸಿದ್ದರು. ಶಾಲಾ ಮಕ್ಕಳ ಆಕಾಶವಾಣಿ ಕಾರ್ಯಕ್ರಮಗಳೂ ಪ್ರಸಾರವಾಗಿದ್ದವು. ಇವರಿಗೆ 2020ರಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯೂ ಲಭಿಸಿತ್ತು.

LEAVE A REPLY

Please enter your comment!
Please enter your name here