ಪುತ್ತೂರು ತಾಲೂಕಿಗೆ 2ನೇ 110 ಕೆ.ವಿ ವಿದ್ಯುತ್ ಉಪಕೇಂದ್ರಕ್ಕೆ ಜಮೀನು ಹಣ ಪಾವತಿ

0

ಶಾಸಕ ಅಶೋಕ್ ಕುಮಾರ್ ರೈ ಪ್ರಯತ್ನಕ್ಕೆ ಫಲ – ಜಮೀನು ಮಂಜೂರು


ಪುತ್ತೂರು: ಉಪ್ಪಿನಂಗಡಿ ಭಾಗದ ವಿದ್ಯುತ್ ಸುಧಾರಣೆಗೆ ರೂಪಿಸಿರುವ 34 ನೆಕ್ಕಿಲಾಡಿ ಗ್ರಾಮದ ಕರುವೇಲುವಿನಲ್ಲಿ 110 ಕೆ.ವಿ ಉಪಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಿದ್ದು, ಇದರ ಡಿಪಿಆರ್‌ಗೆ ಅನುಮೋಧನೆ ನೀಡುವಂತೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಮನವಿ ಸಲ್ಲಿಸಿದ ಕೆಲವೆ ದಿನದಲ್ಲಿ ಜಮೀನಿಗೆ ಹಣ ಪಾವತಿಯಾಗಿ ಜಿಲ್ಲಾಧಿಕಾರಿಯಿಂದ ಮಂಜೂರಾತಿ ಕ್ರಮವು ದೊರಕಿದೆ.

ಇದು 40 ವರ್ಷಗಳ ಬಳಿಕ ಪುತ್ತೂರು ತಾಲೂಕಿಗೆ 2ನೇ 110 ಕೆವಿ ಉಪಕೇಂದ್ರ ಮಂಜೂರು ಆಗಿದೆ.ಕಳೆದ 15 ವರ್ಷಗಳ ಬೇಡಿಕೆಯಾಗಿದ್ದ ಉಪ್ಪಿನಂಗಡಿ ಭಾಗದ 34 ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಹಲವು ಪ್ರಯತ್ನಗಳು ನಡೆದಿತ್ತು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಆಗಿನ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ 3. 26 ಎಕ್ರೆ ಕುಮ್ಕಿ ಜಮೀನು ವಿರಹಿತಗೊಳಿಸಿ ಮಂಜೂರಾಗಿತ್ತು. ಚುನಾವಣೆಗೆ ಮುಂಚೆ ಸದರಿ ಜಮೀನಿಗೆ ರೂ 1,04,97,899 ಕೋಟಿ ರೂಪಾಯಿ ಅನ್ನು ಪಾವತಿಸಲು ಕೆಪಿಟಿಸಿಎಲ್‌ಗೆ ಕಂದಾಯ ಇಲಾಖೆ ಸೂಚಿಸಿತ್ತು ಆದರೆ ಪಾವತಿಸಲು ವಿಳಂಬವಾಗಿತ್ತು. ಈ ಬಗ್ಗೆ ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತರಲಾಯಿತು ಮತ್ತು ಯೋಜನೆಯ ಆಗತ್ಯದ ಬಗ್ಗೆ ವಿವರಿಸಲಾಗಿತ್ತು. ತಕ್ಷಣ ಸ್ಪಂದಿಸಿದ ಶಾಸಕರು ಒಂದೇ ದಿನದಲ್ಲಿ ಇಂಧನ ಸಚಿವರನ್ನು ಭೇಟಿ ಮಾಡಿ ಕೇವಲ 15 ದಿನಗಳಲ್ಲಿ ರೂ. 1,04,97,899 ಅನ್ನು ಪಾವತಿಸಲು ಕ್ರಮ ಕೈಗೊಂಡು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿ 15 ದಿನಗಳಲ್ಲಿ ಮಂಜೂರಾತಿಗೆ ಕ್ರಮ ಕೈಗೊಳ್ಳಾಯಿತು. ಮುಂದೆ ಕೆಪಿಟಿಸಿಎಲ್ ವತಿಯಿಂದ ಡಿಪಿಆರ್ ಹಾಗು ಟೆಂಡರ್ ಪ್ರಕ್ರಿಯೆ ನಡೆಯಬೇಕಿದ್ದು ಶೀಘ್ರ ಕಾಮಗಾಗಿ ಪ್ರಾರಂಭಗೊಳ್ಳಲಿದೆ.

ಮೆಸ್ಕಾಂ ಪ್ರಯತ್ನ
ವಿದ್ಯುತ್ ಉಪಕೇಂದ್ರ ಜಮೀನು ಮಂಜೂರು ಮಾಡಲು ಜಮೀನಿನ ಮೇಲಿನ ಕುಮ್ಕಿ ಸೌಲಭ್ಯವನ್ನು ವಿರಹಿತಪಡಿಸಿ ಆದೇಶಿಸಲಾಗಿತ್ತು. ಆದರೆ ಪ್ರಸ್ತಾವಿತ ಜಮೀನಿನ ಪ್ರಚಲಿತ ಮಾರುಕಟ್ಟೆ ಮೌಲ್ಯ ಮತ್ತು ನಿಯಮಾನುಸಾರ ಇತರ ಶುಲ್ಕ ವಿಧಿಸಿ ಒಟ್ಟು ರೂ. 1,04,97,899 ಅನ್ನು ಸರಕಾರಕ್ಕೆ ಜಮೆ ಮಾಡಲು ಸೂಚನಾ ಪತ್ರ ನೀಡಲಾಗಿತ್ತಾದರೂ ಹಣ ಪಾವತಿಯಾಗಿರಲಿಲ್ಲ. ಈ ಕುರಿತು ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೆ ತಂದು ಯೋಜನೆಯ ಕುರಿತು ವಿವರಿಸಿದ್ದೆ. ಅವರು ತಕ್ಷಣ ಇಂಧನ ಸಚಿವರನ್ನು ಭೇಟಿ ಮಾಡಿ ಕೇವಲ 15 ದಿನದೊಳಗೆ ಜಮೀನು ಮಂಜೂರಾತಿ ಮಾಡಿಸಿಕೊಟ್ಟಿದ್ದಾರೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here