ವಿಟ್ಲ: ಮನೆಯ ಹಿಂಬದಿಯ ಧರೆ ಕುಸಿತದಿಂದಾಗಿ ವ್ಯಕ್ತಿಯೋರ್ವರ ಮನೆಯ ಹಿಂಬದಿಯ ಗೋಡೆಗೆ ಹಾನಿಯಾಗಿ ಭಾರಿ ಪ್ರಮಾಣದ ನಷ್ಟ್ರ ಉಂಟಾದ ಘಟನೆ ಕುಳ ಗ್ರಾಮದ ಅಡ್ಯಾಲು ಎಂಬಲ್ಲಿ ನಡೆದಿದೆ.
ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಳ ಗ್ರಾಮದ ಅಡ್ಯಾಲು ನಿವಾಸಿ ಸುಬನ್ ಸಾಬು ರವರ ಮನೆಯ ಹಿಂಭಾಗದ ಧರೆ ಮನೆ ಮೇಲೆ ಕುಸಿದು ಬಿದ್ದಿದೆ.
ಘಟನೆ ಬಗ್ಗೆ ಮಾಹಿತಿ ಅರಿತ ಕುಳ ಗ್ರಾಮದ ಪ್ರಭಾರ ಗ್ರಾಮಾಡಳಿತಾಧಿಕಾರಿ ಕೃತಿಕಾ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಗ್ರಾ. ಪಂ. ಸದಸ್ಯ ಚಿದಾನಂದ ಪೆಲತ್ತಿಂಜರವರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿ ಮನೆಯವರನ್ನು ಬೇರೆಡೆಗೆ ಸ್ಥಳಾಂತರ ಮಾಡುವ ವ್ಯವಸ್ಥೆಯನ್ನು ಮಾಡಿದರು.
ಘಟನಾ ಸ್ಥಳಕ್ಕೆ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜರಾಮ್ ಕೆ.ಬಿ., ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್, ಮಾಜಿ ಬ್ಲಾಕ್ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಮೋಹನ್ ಗುರ್ಜಿನಡ್ಕ, ಕಬಕ ಗ್ರಾ.ಪಂ.ಸದಸ್ಯರಾದ ಶಾಬ, ಎಸ್.ಸಿ.ಘಟಕದ ಅಧ್ಯಕ್ಷರಾದ ರಾಮಣ್ಣ ಪಿಲಿಂಜ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ತೌಸಿಪ್, ಪ್ರಮುಖರಾದ ಮೂಸೆ ಕುಂಞಿ ಕಬಕ, ರಮ್ಲ ಕಬಕ, ಹಮೀದ್ ಕಲ್ಲಂದಡ್ಕರವರು ಆಗಮಿಸಿ ಮಾಹಿತಿ ಪಡೆದರು.