ಪುತ್ತೂರು ಜು.26: ಪ್ರೀವಂತ ಕ್ರಿಯೇಟಿವ್ ಸೆಂಟರ್ ಮಂಗಳೂರು ನಿರ್ಮಾಣದ ಭಾರತೀಯ ಯೋಧರ ಹಾಗೆ ಕಾರ್ಗಿಲ್ ಯುದ್ಧದ ವೀರರ ಕುರಿತಾದ ಧೀರ ಚರಿತೆ ವಿಶೇಷ ಕಾರ್ಯಕ್ರಮ ಬಿಡುಗಡೆ ಜು.26 ರಂದು ರೇಡಿಯೋ ಪಾಂಚಜನ್ಯ ಪುತ್ತೂರು ಇಲ್ಲಿ ನಡೆಯಿತು.
ಪುತ್ತೂರು ನಗರ ಸಭಾ ಸದಸ್ಯರು ಹಾಗೆ ರೇಡಿಯೋ ಪಾಂಚಜನ್ಯದ ಆಡಳಿತ ಸಮಿತಿಯ ಕೋಷಧಿಕಾರಿ ಗೌರಿ ಬನ್ನೂರ್ ವಿಶೇಷ ಅತಿಥಿಯಾಗಿ ಆಗಮಿಸಿ ಧೀರ ಚರಿತೆ ಕಾರ್ಯಕ್ರಮವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರೇಡಿಯೋ ಪಾಂಚಜನ್ಯದ ಕಾರ್ಯಕ್ರಮ ಸಂಯೋಜಕ ತೇಜಸ್ವಿನಿ ಹಾಗೆ ಪ್ರೀವಂತ ಕ್ರಿಯೇಟಿವ್ ಸೆಂಟರ್ ನ ನಿರ್ದೇಶಕ ಕುಮಾರೇಶ್ ಕಣಿಯೂರು ಉಪಸ್ಥಿತರಿದ್ದರು.
ಧೀರ ಚರಿತೆ ಕಾರ್ಯಕ್ರಮ ನಡೆಸಿಕೊಟ್ಟ ಪ್ರೀವಂತ ಕ್ರಿಯೇಟಿವ್ ಸೆಂಟರ್ ವಿದ್ಯಾರ್ಥಿಗಳಾದ ಧನ್ವಿ ಪಾಣಾಜೆ, ತೇಜಸ್ ಮಂಗಳೂರು, ಸುಶ್ಮಿತಾ ಬೆಳ್ತಂಗಡಿ ಹಾಗೂ ಹಿಷಾ ಹರ್ಷ ಸುಳ್ಯ ಇವರಿಗೆ ಸ್ಮರಣಿಕೆ ನೀಡಿ ಅಭಿನಂದನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ನ ವಿದ್ಯಾರ್ಥಿಗಳ ಪೋಷಕರು, ರೇಡಿಯೋ ಪಾಂಚಜನ್ಯದ ತಾಂತ್ರಿಕ ಸಲಹೆಗಾರರಾದ ಪ್ರಶಾಂತ್ ಕೆ ಎಸ್ ಉಪಸ್ಥಿತರಿದ್ದರು.
ಬಿಡುಗಡೆ ಕಾರ್ಯಕ್ರಮದ ಬಳಿಕ ಧೀರ ಚರಿತೆ ವಿಶೇಷ ಕಾರ್ಯಕ್ರಮದ ಪ್ರೀಮಿಯರ್ ಶೋ ನಡೆಸಲಾಯಿತು. ಧೀರ ಚರಿತೆ ವಿಶೇಷ ಕಾರ್ಯಕ್ರಮ ಸಂಜೆ 5 ಗಂಟೆಗೆ ಪ್ರೀವಂತ ಯೂಟ್ಯೂಬ್ ಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಾಗೆ ಪ್ರೀವಂತ ವೆಬ್, ಪ್ರೀವಂತ ಆಪ್ ಲ್ಲೂ ವೀಕ್ಷಣೆ ಮಾಡಬಹುದು.