ನೆಲ್ಯಾಡಿ: ನೆಲ್ಯಾಡಿ ಬೆಥನಿ ಐಟಿಐ ಪ್ರಾಧ್ಯಾಪಕ, ನೆಲ್ಯಾಡಿ ಜೇಸಿಐ ಪೂರ್ವಾಧ್ಯಕ್ಷ ಜೋನ್ ಪಿ.ಎಸ್.ರವರಿಗೆ ಜೇಸಿಐ ಶಂಕರನಾರಾಯಣ ಇದರ ಆತಿಥ್ಯದಲ್ಲಿ ನಡೆದ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಪ್ರತಿಷ್ಠಿತ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೋನ್ ಪಿ.ಎಸ್.ಅವರು 1992ರಿಂದ 1994ರ ತನಕ ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 1994ರಿಂದ 1996 ತನಕ ಕೆಎಸ್ಆರ್ಟಿಸಿ ಪ್ರಾದೇಶಿಕ ಕಾರ್ಯಾಗಾರ ಹುಬ್ಬಳ್ಳಿಯಲ್ಲಿ ಟೆಕ್ನೀಶಿಯನ್ ಅಪ್ರೆಂಟಿಸ್ ತರಬೇತಿ ಪಡೆದು 1996ರಿಂದ ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದು, ಪಸ್ತುತ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೇಸಿಐಯಲ್ಲಿಯೂ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು 2015ರಲ್ಲಿ ನೆಲ್ಯಾಡಿ ಜೇಸಿಐ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದ್ದರು. ನೆಲ್ಯಾಡಿಯ ಎಸ್ತಾಫನ್ ಪಿ.ಎಂ.ಮತ್ತು ಎಲಿಯಮ್ಮ ದಂಪತಿಯ ಪುತ್ರರಾದ ಇವರು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಹಾಗೂ ಕೊಡಗು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾ ಇನ್ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಂಡಿದ್ದಾರೆ.
ನೆಲ್ಯಾಡಿ ಜೇಸಿಐಗೆ ವಿಶೇಷ ಪ್ರಶಸ್ತಿ:
ಜೇಸಿಐ ನೆಲ್ಯಾಡಿಯು ಸದಸ್ವತ್ವ ನೊಂದಣಿಯಲ್ಲಿ ಶೇ.100 ಸಾಧನೆ ಮಾಡಿರುವುದಕ್ಕೆ ಜೇಸಿಐ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ಸಮಾರಂಭದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದರು. ನೆಲ್ಯಾಡಿ ಜೇಸಿಐ ಅಧ್ಯಕ್ಷ ದಯಾಕರ ರೈ, ಪೂರ್ವಾಧ್ಯಕ್ಷರಾದ ಪುರಂದರ ಗೌಡ ಡೆಂಜ, ಇಸ್ಮಾಯಿಲ್, ಶಿವಪ್ರಸಾದ್, ಗಿರೀಶ್, ಘಟಕದ ನಿರ್ದೇಶಕ ಆನಂದ ಅಜಿಲ ಉಪಸ್ಥಿತರಿದ್ದರು.