ಗೋಳಿತ್ತಡಿ: ಸರಕಾರಿ ಜಾಗ ಅತಿಕ್ರಮಣ ತೆರವು

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಪೇಟೆ ಸಮೀಪ ಸರಕಾರಿ ಜಾಗ ಅತಿಕ್ರಮಣ ಮಾಡಿ ರಸ್ತೆ ಮಾರ್ಜಿನ್‌ನಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಶೆಡ್ ಅನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಕಂದಾಯ ಇಲಾಖೆಯಿಂದ ಜು.26ರಂದು ತೆರವುಗೊಳಿಸಲಾಗಿದೆ.

ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿನ ಸರ್ವೆ ನಂ.295/1ಎ1ರಲ್ಲಿ ಸರಕಾರಿ ಜಮೀನು ಅತಿಕ್ರಮಿಸಿ ಕೊಯಿಲ ನಿವಾಸಿ ಆದಂ ಎಂಬವರು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಪಕ್ಕದ ಜಮೀನಿನ ರಹಿಮತ್ ಎಂಬವರು ಆಕ್ಷೇಪಿಸಿ ತಹಶೀಲ್ದಾರ್‌ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ನಡೆಸಿದ ಕಡಬ ತಹಶೀಲ್ದಾರ್ ಅವರು ಸರಕಾರಿ ಜಮೀನು ಅತಿಕ್ರಮಣ ತೆರವಿಗೆ ಆದೇಶಿಸಿದ್ದರು. ಈ ಆದೇಶದನ್ವಯ ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಅತಿಕ್ರಮಣ ತೆರವುಗೊಳಿಸಿದ್ದಾರೆ. ಕಡಬ ಕಂದಾಯ ನಿರೀಕ್ಷಕ ಪೃಥ್ವಿರಾಜ್, ರಾಮಕುಂಜ ಗ್ರಾಮಕರಣಿಕ ಸತೀಶ್‌ರವರ ನೇತೃತ್ವದಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಕಡಬ ಎಎಸ್‌ಐ ಸುರೇಶ್ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು.

LEAVE A REPLY

Please enter your comment!
Please enter your name here