ವಿಟ್ಲ: ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಅವರ ಮೇಲೆ ನಡೆದ ಅಮಾನವೀಯ ಕೃತ್ಯವಾಗಿದ್ದು, ಇದೊಂದು ರಾಜಕೀಯ ಪ್ರೇರಿತ ಕೃತ್ಯವಾಗಿದ್ದು, ವಿಕೃತ ಮನಸ್ಸು ಹೊಂದಿರುವ ಕಾಂಗ್ರೆಸಿಗರ ಕೆಲಸದಿಂದ ನಾಗರೀಕರು ತಲೆತಗ್ಗಿಸುವಂತೆ ಮಾಡಿದೆ ಎಂದು ಅನಂತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ ತುಂಬೆದಕೋಡಿರವರು ಹೇಳಿದರು.
ಅವರು ಬಂಟ್ವಾಳದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ರಾಜೇಶ್ ನಾಯ್ಕ್ ರವರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಯನ್ನು ಸಹಿಸಲಾರದೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮುಂದುವರಿದರೆ ರಸ್ತೆಗಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಲ್ಲೆಗೊಳಗಾದ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿರವರು ಮಾತನಾಡಿ, ಅನಂತಾಡಿ ಗ್ರಾ.ಪಂ.ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಗಿರಿ ಮಿತಿಮೀರಿದ್ದು, ಗ್ರಾಮಸ್ಥರಿಗೆ ಭದ್ರತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅರೋಪ ಮಾಡಿದರು.
ಗ್ರಾ.ಪಂ.ಉಪಾಧ್ಯಕ್ಷರಾದ ಕುಸುಮದಾರ ಗೌಡ, ಬೂತ್ ಅಧ್ಯಕ್ಷ ಮಹಾಬಲ ಪೂಜಾರಿ, ಸಂಚಾಲಕ ನಾಗೇಶ್ ಭಂಡಾರಿ, ಬಿಜೆಪಿ ಕಾರ್ಯಕರ್ತ ಶಶಿಕಾಂತ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು.