ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಯಕ್ಷಗಾನ ಬಯಲಾಟ ಜು. 29 ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ನಡೆಯಲಿದೆ.
ಜು. 29 ರಂದು ಸಂಜೆ 4.30 ಕ್ಕೆ ಹವ್ಯಾಸಿ ಯಕ್ಷಗಾನ ಕಲಾವಿದೆ, ಲಯನೆಸ್ ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಳಿಕ ಯುವ ಕಲಾವಿದರಿಂದ ಮುರಾಸುರ ವಧೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತು ಆರ್ಲಪದವು ಸ್ವಸ್ತಿಕ್ ಜ್ಯೋತಿಷ್ಯಾಲಯದ ಜ್ಯೋತಿಷಿ ಲೋಕೇಶ್ ಬಲ್ಯಾಯ ದೊಡ್ಡಡ್ಕ ಭಾಗವಹಿಸಲಿದ್ದಾರೆ. ಹಿರಿಯ ಅರ್ಥಧಾರಿಗಳಾದ ಬಿ. ವಿಷ್ಣುರಾವ್ ಮತ್ತು ಭಾಸ್ಕರ ಶೆಟ್ಟಿ ಹಾಗೂ ಬೆಟ್ಟಂಪಾಡಿ ದೇವಾಲಯದ ನಿವೃತ್ತ ಪ್ರಧಾನ ಅರ್ಚಕ ದಿವಾಕರ ಭಟ್ ರವರಿಗೆ ಸನ್ಮಾನ ನಡೆಯಲಿದೆ.
ನಂತರ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.