ಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿ ತೆಂಗು ಮೌಲ್ಯವರ್ಧನೆ ಮಾಹಿತಿ & ಸಾಕ್ಷ್ಯ ಚಿತ್ರ ಚಿತ್ರೀಕರಣ

0

ಪುತ್ತೂರು: ಸಿರಿ ಕಡಮಜಲು ಕೃಷಿ ಕ್ಷೇತ್ರದಲ್ಲಿ ದ.ಕ.ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ವತಿಯಿಂದ ತೆಂಗು ಮೌಲ್ಯವರ್ಧನೆ ಮಾಹಿತಿ ಸಾಕ್ಷ್ಯ ಚಿತ್ರದ ಚಿತ್ರೀಕರಣವು ಡೈಜಿವಲ್ಡ್ ಚಾನೆಲ್‌ನ ಸಹಕಾರದೊಂದಿಗೆ ಕಲಾವಿದ ಹಾಸ್ಯ ರತ್ನ ಅರವಿಂದ ಬೋಳಾರ್ ತಂಡದಿಂದ ಜು.24ರಂದು ನಡೆಸಲಾಯಿತು.


ತೆಂಗು ರೈತ ಉತ್ಪಾದಕರ ಕಂಪೆನಿಯ ಪಂಚಕಲ್ಪ ಯೋಜನೆಯ ಬಗ್ಗೆ ಸಾಕ್ಷ್ಯ ಚಿತ್ರದಲ್ಲಿ ಡೈಜಿವಲ್ಡ್‌ನ ನಿರ್ದೇಶಕ ವಾಲ್ಟರ್ ನಂದಳಿಕೆ ವಿವರಣೆ ನೀಡಿದರು. ರೈತನ ಪಾತ್ರದಲ್ಲಿ ಅರವಿಂದ ಬೋಳಾರ್ ಮಿಂಚಿದರು. ತೆಂಗು ತೋಟದ ಯಜಮಾನನ ಪಾತ್ರದಲ್ಲಿ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಮತ್ತು ತೆಂಗುಮರ ಹತ್ತಿ ತೆಂಗಿನ ಕಾಯಿ ಕೀಳುವ ‘ಗಣೇಶ’ನ ಪಾತ್ರದಲ್ಲಿ ಅರವಿಂದ ಬೋಳಾರ್ ಹಾಗೂ ತೆಂಗು ಕಾಯಿ ಕೀಳುವ ಗಣೇಶನನ್ನು ಆಮಂತ್ರಿಸಲು ಬರುವ ಪಾತ್ರದಲ್ಲಿ ವಾಲ್ಟರ್ ನಂದಳಿಕೆ ಅಮೋಘವಾಗಿ ಅಭಿನಯಿಸಿದರು. ಸಹಕಲಾವಿದನ ಪಾತ್ರದಲ್ಲಿ ಪೆರುವಾಜೆಯ ಗಣೇಶ್ ಭಾಗವಹಿಸಿದ್ದರು. ಚಿತ್ರೀಕರಣ ಸಂದರ್ಭದಲ್ಲಿ ದ.ಕ. ಜಿಲ್ಲಾ ರೈತ ತೆಂಗು ಉತ್ಪಾದಕರ ಕಂಪೆನಿಯ ಅಧ್ಯಕ್ಷ ಕುಸುಮಾಧರ್ ಎಸ್. ಕೆ, ನಿರ್ದೇಶಕರಾದ ವರ್ಧಮಾನ ಜೈನ್, ಲತಾ, ಮತ್ತು ಕಂಪೆನಿಯ ಸಿಬ್ಬಂದಿಗಳಾದ ನವ್ಯಶ್ರೀ ಅಮೈ, ರೂಪ, ನಿಶ್ಚಿತಾ, ಸಂದೇಶ್, ಯತೀಶ್, ಕೃಪಾ, ಅನುಪ್ ಹಾಗೂ ಚಿತ್ರೀಕರಣ ತಂಡದವರು ಉಪಸ್ಥಿತರಿದ್ದರು.

ಸದ್ರಿ ಸಾಕ್ಷ್ಯ ಚಿತ್ರವು ಸಂಪೂರ್ಣಗೊಂಡು ಮುಂದಿನ ದಿನದಲ್ಲಿ ಯು ಟ್ಯೂಬ್‌ನಲ್ಲಿ ಡೈಜಿವಲ್ಡ್ ಚಾನಲ್ ನಲ್ಲಿ ಮತ್ತು ಅರವಿಂದ ಬೋಳಾರ್ ಲಿಂಕ್ ನಲ್ಲಿ ಪ್ರಸಾರಗೊಳ್ಳಲಿದೆ.
– ಕುಸುಮಾಧರ್ ಎಸ್. ಕೆ

ಭಾರತದಲ್ಲೆ ಪ್ರಥಮವಾಗಿ ನಡೆದ ತೆಂಗು ಮೌಲ್ಯವರ್ದನೆ ಸಾಕ್ಷ್ಯ ಚಿತ್ರದಿಂದ ಮುಂದಿನ ದಿನದಲ್ಲಿ ತೆಂಗು ಉತ್ಪಾದಕರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕಡಮಜಲು ಸುಭಾಷ್‌ಚಂದ್ರ ರೈ,
ತೆಂಗು ಉತ್ಪಾದಕರು.

LEAVE A REPLY

Please enter your comment!
Please enter your name here