ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮಹಾಸಭೆ – ರೂ.1,49,061 ನಿವ್ವಳ ಲಾಭ, ಶೇ.8 ಡಿವಿಡೆಂಟ್

0

ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಜು.29ರಂದು ಕುಂಬ್ರ ಅಕ್ಷಯ ಆರ್ಕೇಡ್‌ನ ಮಿನಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಆರ್.ಸಿ ನಾರಾಯಣರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ 2022-23ನೇ ಸಾಲಿನ ವರದಿಯನ್ನು ಸಂಘದ ಉಪಾಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ವಾಚಿಸಿದರು. 2022-23ನೇ ಸಾಲಿನ ಲೆಕ್ಕಪರಿಶೋಧನ ಲೆಕ್ಕ ಪತ್ರವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನರವರು ಮಂಡಿಸಿದರು, ಸಂಘವು ವರದಿ ಸಾಲಿನಲ್ಲಿ 149061.86 ರೂಪಾಯಿ ಲಾಭಗಳಿಸಿದ್ದು, ಸದಸ್ಯರಿಗೆ ಶೇ.8 ಡಿವಿಡೆಂಟ್ ಕೊಡುವುದಾಗಿ ಸಂಘದ ಅಧ್ಯಕ್ಷರು ಘೋಷಣೆ ಮಾಡಿದರು.

ಅತಿಥಿಗಳಾದ ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷರಾದ ಸಂಜೀವ ಪೂಜಾರಿ ಬೊಳ್ಳಾಯಿ ಮಾತಾನಾಡಿ, ಸಂಸ್ಥೆಯ ಕಛೇರಿ ಆಧುನೀಕರಣ ಹೊಂದಿ ರಾಷ್ಟ್ರಿಕೃತ ಬ್ಯಾಂಕ್‌ಗೆ ಸಮಾನವಾಗಿ ನಿರ್ಮಿಸಿದ್ದಾರೆ ಮುಂದೆ ಶಾಖೆಗಳನ್ನು ಪ್ರತಿ ಗ್ರಾಮದಲ್ಲಿ ತೆರೆಯುವಂತೆ ಕರೆ ನೀಡಿದರು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ಮಾತನಾಡಿ, ತಾಲೂಕಿನಲ್ಲಿ ಐದು ಮೂರ್ತೆದಾರರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ಸಾಲ ಸೌಲಭ್ಯ ನೀಡುತ್ತಾ ಸಮಾಜದ ಯುವಕ ಯುವತಿಯರಿಗೆ ಉದ್ಯೋಗವನ್ನು ಮಾಡಿ ಅವರ ಕುಟುಂಬದ ಅಭಿವೃದ್ಧಿಗೆ ತಮ್ಮ ಕೊಡುಗೆ ಅಪಾರ ಇನ್ನೂ ಹೆಚ್ಚು ಜನರಿಗೆ ನೌಕರಿ ನೀಡುವಂತೆ ಆಗಲಿ ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್‌ರವರು ಮಾತನಾಡಿ, ಸಂಘದ ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅಲ್ಲಿ ಪ್ರಧಾನ ಕಛೇರಿಯನ್ನು ತೆರೆದು ನಂತರ ಮುಂದಿನ ಯೋಜನೆಯಾಗಿ 2 ಶಾಖೆಯನ್ನು ತೆರೆಯುವುದೆಂದು ತಿಳಿಸಿದರು. ಇದಕ್ಕೆ ಸರ್ವ ಸದಸ್ಯರು ಸಹಕಾರ ನೀಡಬೇಕೆಂದು ಕರೆ ನೀಡಿದರು. ನಿರ್ದೇಶಕ ವಸಂತ ಪೂಜಾರಿ ಬಂಬಿಲ ಸನ್ಮಾನ ಪತ್ರ ಓದಿದರು. ಮಹಾಸಭೆಯ ತಿಳುವಳಿಕೆ ಪತ್ರಿಕೆಯನ್ನು ನಿರ್ದೇಶಕಿ ತ್ರಿವೇಣಿ ಪಲ್ಲತ್ತಾರು ವಾಚಿಸಿದರು.
ವೇದಿಕೆಯಲ್ಲಿ ನಿರ್ದೇಶಕರಾದ ವಿಜಯ ಪೂಜಾರಿ ಆನಡ್ಕ, ಕೊರಗಪ್ಪ ಪೂಜಾರಿ ಕಾವು, ರಾಮಣ್ಣ ಪೂಜಾರಿ ಕರ್ನೂರು, ರಾಜೇಶ್ ಪಲ್ಲತ್ತಾರು ಉಪಸ್ಧಿತರಿದ್ದರು. ಸಿಬ್ಬಂದಿ ಪ್ರಮೀತ.ಎಸ್ ವಿದ್ಯಾರ್ಥಿ ಪ್ರೋತ್ಸಾಹಧನದ ಪಟ್ಟಿ ಓದಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸ್ಮೃತಿ ಪಲ್ಲತ್ತಾರು ಪ್ರಾರ್ಥಿಸಿದರು. ಸತೀಶ್ ಕೋಡಿಬೈಲು ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ದಿನೇಶ್ ಕಂಪ ವಂದಿಸಿದರು. ಸುದೇಂದ್ರನ್.ಪಿ ಸಹಕರಿಸಿದರು.

ಸನ್ಮಾನ, ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ

ಈ ಸಂದರ್ಭದಲ್ಲಿ ಹಿರಿಯ ಮೂರ್ತೆದಾರ ವಿಶ್ವಂಭರ ಪೂಜಾರಿ ಮರತ್ತಮೂಲೆ ಸುಳ್ಯಪದವು ರವರನ್ನು ಸನ್ಮಾನಿಸಲಾಯಿತು. ಮೂರ್ತೆದಾರರ 15 ಮಕ್ಕಳಿಗೆ ರೂ.17250/- ರಂತೆ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಿಸಲಾಯಿತು. ವಿದ್ಯಾರ್ಥಿ ಅಮಿತಾ ಒತ್ತೆಮುಂಡೂರು ಕೋರಿಕ್ಕಾರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
‘ ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ಯೋಜನೆಯಾಗಿ ಸಂಘದ ಸ್ವಂತ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಿ, ಪ್ರಧಾನ ಕಛೇರಿಯನ್ನು ತೆರೆಯುವುದು ಆ ಬಳಿಕ 2 ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಸಹಕಾರಿಯ ಬೆಳವಣಿಗೆಯಲ್ಲಿ ಸರ್ವರ ಸಹಕಾರ ಅಗತ್ಯ.’

  • ಆರ್.ಸಿ ನಾರಾಯಣ,
    ಅಧ್ಯಕ್ಷರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕುಂಬ್ರ

LEAVE A REPLY

Please enter your comment!
Please enter your name here