ಕಡಬ: ಇಲ್ಲಿನ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದಲ್ಲಿರುವ ಗುಡ್ಡಪ್ಪ ನಾಕ್ ಕಾಂಪ್ಲೆಕ್ಸ್ನಲ್ಲಿ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆ ಶ್ರೀರಾಮ್ ಆಗ್ರೋಟೆಕ್ ಜು.30ರಂದು ಶುಭಾರಂಭಗೊಂಡಿತು.
ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಅವರು ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರಮ ಜೀವಿಯಾಗಿರುವ ಉಮೇಶ್ ಅವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ಕಾರಣ ಇಂದು ಸ್ವಂತ ಮಳಿಗೆಯೊಂದನ್ನು ತೆರೆಯಲು ಸಾಧ್ಯವಾಯಿತು. ಬೆಳೆಯುತ್ತಿರುವ ಕಡಬದಲ್ಲಿ ರೈತರ ಅಗತ್ಯತೆಯನ್ನು ಪೂರೈಸುವಲ್ಲಿ ಈ ಮಳಿಗೆ ಕಾರ್ಯನಿರ್ವಹಿಸಲಿ, ವ್ಯವಹಾರದಲ್ಲಿ ಪ್ರಾಮಾಣಿಕತೆ ಮತ್ತು ಕಾರ್ಯತತ್ವರತೆ ಇದ್ದರೆ ಯಶಸ್ಸು ಖಂಡಿತಾ ಎಂದು ಹೇಳಿ ಶುಭ ಹಾರೈಸಿದರು.
ಅತಿಥಿಯಾಗಿದ್ದ ಉಜಿರೆ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ರೈ ಪೆರ್ಲ, ಬಿಜೆಪಿ ಮುಖಂಡ ಪ್ರಕಾಶ್ ಎನ್.ಕೆ. ಕಡಬ ಕದಂಬ ಅಟೋ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ಅವರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಮ ಶೆಟ್ಟಿ ಕೇಪು, ಮೋಹನ್ ಗೌಡ ಕೆರೆಕೋಡಿ, ಜಯಚಂದ್ರ ರೈ ಕುಂಟೋಡಿ, ಜಿನ್ನಪ್ಪ ಸಾಲಿಯಾನ್, ಗುಡ್ಡಪ್ಪ ಗೌಡ ಕಲ್ಲೆಂಬಿ, ಹರಿಯಪ್ಪ ಗೌಡ ಶೆಟ್ಟಿಗದ್ದೆ ಪಂಜ, ಮಂಜುನಾಥ್ ಕೊಳಂತಾಡಿ, ಡಾ. ಪ್ರಜ್ವಲ್ ಮುಂಡೋಡಿ, ಚೈತ್ರ ಕೆರೆಕೋಡಿ, ನೀಲಮ್ಮ ಕೆರೆಕೋಡಿ, ಕವಿತ ಶೆಟ್ಟಿಗದ್ದೆ ಅವರು ಉಪಸ್ಥಿತರಿದ್ದರು. ಶಿವಪ್ರಸಾದ್ ರೈ ಮೈಲೇರಿ ಅವರು ಕಾರ್ಯಕ್ರಮ ನಿರೂಪಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು. ಪ್ರೇಮ ಕೇಪು ಹಾಗೂ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು. ಸಂಸ್ಥೆಯ ಮಾಲಕ ಉಮೇಶ್ ಕೆರೆಕೋಡಿ ಅವರು ಅತಿಥಿಗಳನ್ನು ಬರಮಾಡಿಕೊಂಡರು. ಉದ್ಘಾಟನೆಗೆ ಮುನ್ನ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.