ಸೆ.03: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR TET)-2023 -ವಿದ್ಯಾಮಾತಾ ಅಕಾಡೆಮಿಯಲ್ಲಿ ಆನ್ಲೈನ್ ತರಬೇತಿ

0

ಪುತ್ತೂರು: ಶಿಕ್ಷಕರ ನೇಮಕಾತಿಗೆ ಅರ್ಹರಾಗಲು KAR TET ಪರೀಕ್ಷೆಯನ್ನು ಕನಿಷ್ಟ ಅರ್ಹತಾ ಪರೀಕ್ಷೆಯಾಗಿ ನಡೆಸಲಾಗುತ್ತದೆ ಸರಕಾರವು ಸೆಪ್ಟೆಂಬರ್ 03ಕ್ಕೆ KAR TET ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಿದ್ದು, ಕೆಲವು ಸಮಯಗಳ ಹಿಂದೆ ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಲೂ ಕೂಡ KAR TET ಪರೀಕ್ಷೆಯನ್ನು ಕಡ್ಡಾಯ ಮಾಡುವ ಮುನ್ಸೂಚನೆಯನ್ನು ನೀಡಿದ್ದನ್ನು ಗಮನಿಸಬಹುದು. ಈ ನಿಟ್ಟಿನಲ್ಲಿ ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯು (TET) ಮಹತ್ವಪೂರ್ಣವಾಗಿದೆ.

ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ಸಂಸ್ಥೆಯಾಗಿರುವ , ವಿದ್ಯಾಮಾತಾ ಅಕಾಡೆಮಿಯು TET ಬರೆಯುವ ಶಿಕ್ಷಕರಿಗಾಗಿ ಆನ್ಲೈನ್ ತರಗತಿಯನ್ನು ನಡೆಸಲಿದೆ. ಕಳೆದ 3 TET ಪರೀಕ್ಷೆಗಳಲ್ಲಿ 70 ಕ್ಕೂ ಮಿಕ್ಕಿದ ಅಭ್ಯರ್ಥಿಗಳು ಉತ್ತಮ ಅಂಕಗಳೊಂದಿಗೆ , TET ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿರುತ್ತಾರೆ. ಅಲ್ಲದೇ 2022-23 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (GPSTR) ಯಲ್ಲಿ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದ 5 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ.

KAR TET ಪರೀಕ್ಷೆಗೆ ಪೂರ್ವ ತಯಾರಿಯನ್ನು ನಡೆಸುವ ಅಭ್ಯರ್ಥಿಗಳು ಆನ್ಲೈನ್ ತರಗತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆನ್ಲೈನ್ ತರಗತಿಗಳು ಪ್ರತಿದಿನ ರಾತ್ರಿ 08ರಿಂದ 09ರವರೆಗೆ (ದಿನನಿತ್ಯ ಒಂದು ಗಂಟೆ) ಕನ್ನಡ,ಇಂಗ್ಲೀಷ್,ಹಿಂದಿ, ಶಿಶು ವಿಕಸನ ಮತ್ತು ಬೋಧನಾ ಕ್ರಮ,ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ನುರಿತ ತರಬೇತುದಾರರಿಂದ ತರಬೇತಿಯನ್ನು ನಡೆಸಲಾಗುವುದು. ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆಮಾಡಿ ಪ್ರವೇಶಾತಿ ಪಡೆದುಕೊಳ್ಳಬಹುದು ಇಲ್ಲವೇ ನೇರವಾಗಿ ಭೇಟಿ ಕೊಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.


ತರಬೇತಿಗಾಗಿ ಸಂಪರ್ಕಿಸಿ :ವಿದ್ಯಾಮಾತಾ ಅಕಾಡೆಮಿ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ.
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎಪಿಯಂಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು ದ.ಕ -574201
ಫೋನ್ ನಂ. 96204 68869

LEAVE A REPLY

Please enter your comment!
Please enter your name here