ಪುತ್ತೂರು: ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಗೇಟ್ ಬಳಿ ಮರವೊಂದು ಬಿದ್ದು ಆವರಣಗೋಡೆ ಹಾನಿಗೊಂಡ ಘಟನೆ ಆ.1ರ ಬೆಳಗ್ಗೆ ನಡೆದಿದ್ದು, ಬೆಳಗ್ಗಿನ ಸಮಯ ರೋಗಿಗಳ ಸಂದರ್ಶಕರ ಸಂಖ್ಯೆ ಇರದಿರುವ ಹಿನ್ನೆಲೆಯಲ್ಲಿ ಭಾರಿ ಅನಾಹುತ ತಪ್ಪಿದೆ.
ದಿನ ನಿತ್ಯ ಬೆಳಗ್ಗಿನಿಂದ ಸಂಜೆಯ ತನಕ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಬರುವ ಮತ್ತು ಹೋಗುವ ಆಸ್ಪತ್ರೆಯ ಗೇಟ್ ಬಳಿಯೇ ಪಕ್ಕದ ಮರವೊಂದು ಬಿದ್ದಿದೆ. ಮರ ಬೆಳ್ಳಂಬೆಳಗೆ ಬಿದ್ದರಿಂದ ಅಪಾಯ ತಪ್ಪಿದೆ. ಮರ ಬಿದ್ದು ಆಸ್ಪತ್ರೆಯ ಆವರಣಗೋಡೆಗೆ ಹಾನಿಯಾಗಿದೆ.