ನೆಲ್ಲಿಕಟ್ಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಿಸಿ ಟಿವಿ ಕ್ಯಾಮರಾ ಕಳವು- 2ನೇ ಬಾರಿ ನಡೆದ ಕಳ್ಳತನ

0

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ನೆಲ್ಲಿಕಟ್ಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಜು.30ರಂದು ರಾತ್ರಿ ಕಳವಾಗಿದೆ. ಇದು 2ನೇ ಬಾರಿ ನಡೆದ ಕಳವು ಪ್ರಕರಣವಾಗಿದೆ.


ಕೆಲವು ತಿಂಗಳ ಹಿಂದೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಿಸಿಟಿವಿ ಕ್ಯಾಮರ ಕಳವಾಗಿತ್ತು. ಈ ಕುರಿತು ಆರೋಗ್ಯ ಕೇಂದ್ರದವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡುವಂತೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ. ಆರೋಗ್ಯ ಇಲಾಖೆಯಿಂದ ಹೊಸ ಸಿಸಿಟಿವಿ ಕ್ಯಾಮರ ಕೆಲ ದಿನಗಳ ಹಿಂದೆಯಷ್ಟೆ ಅಳವಡಿಸಲಾಗಿತ್ತು. ಇದೀಗ ಅದು ಕೂಡಾ ಕಳವಾಗಿದೆ. ಈ ಕುರಿತು ಆರೋಗ್ಯ ಇಲಾಖೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here