ಪುತ್ತೂರು: ನಲಿಕೆಯವರ ಸಮಾಜ ಸೇವಾ ಸಂಘದ 2022-23ನೇ ಸಾಲಿನ ವರ್ಷಾಚರಣೆ ಮತ್ತು ಆಟಿ ದಿನ ಕಾರ್ಯಕ್ರಮ ಆ.6ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರ ಇದ್ಪಾಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ಹಿರೇಬಂಡಾರಿ ಧನುಷ್ ಕುಮಾರ್ ಬಳಗದಿಂದ ಕೊಳಲು ವಾಧನ, ತನುರಾಗ ಬಳಗ ಬುಳೇರಿಕಟ್ಟೆಯವರಿಂದ ಕರೋಕೆ ಗಾಯನ, ಜಯರಾಮ್ ಕಾಂಚನ ಪ್ರಸ್ತುತಿಯ ತುಳುವ ಸಂಸ್ಕೃತಿ – ತುಳುಭಾಷೆ ರಸಪ್ರಶ್ನೆ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ.ಜಾ.ಯವರಿಂದ ಸರಕಾರದಿಂದ ಸಿಗುವ ವಿವಿಧ ಸವಲತ್ತುಗಳ ಯೋಜನೆಯ ಮಾಹಿತಿ ಮತ್ತು ಸ್ವ ಉದ್ಯೋಗ ಮಾಹಿತಿ, ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ನಲಿಕೆಯವರ ಸಮಾಜ ಸೇವಾ ಸಂಘದ ಮಾಜಿ ಜಿಲ್ಲಾಧ್ಯಕ್ಷ ಲೋಕಯ್ಯ ಸೇರ, ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ದೈವನರ್ತಕ ಈಶ್ವರಮಂಗಲದ ಗೋಪಾಲ ಅಜಲ ನೀರಳಿಕೆ ಮತ್ತು ಶಿಕ್ಷಣದಲ್ಲಿ ವಿಶೇಷ ಸಾಧನೆ ಮಾಡಿದ ಕು.ಶ್ರೀಕೃಷ್ಣ ಪಾಣಾಜೆ ಅವರನ್ನು ಸನ್ಮಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವಿ ಎಂಡೆಸಾಗು, ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ, ಜೊತೆ ಕಾರ್ಯದರ್ಶಿ ಅರ್ಪಣಾ ಮುಂಡ್ಯ ಉಪಸ್ಥಿತರಿದ್ದರು.