ಪುತ್ತೂರು ಬೆಥನಿ ಆ.ಮಾ ಶಾಲೆಯ ವಿದ್ಯಾರ್ಥಿ ರಿಶೋನ್ ಲಸ್ರಾದೋ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಜುಲೈ 31 ರಂದು ಸವಣೂರಿನ ವಿದ್ಯಾರಶ್ಮಿಯಲ್ಲಿ ನಡೆದ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ , ಪ್ರೌಢಶಾಲಾ ಕರಾಟೆ ಸ್ವರ್ಧಾಕೂಟದಲ್ಲಿ 40KG ವಿಭಾಗದಲ್ಲಿ ರಿಶಾನ್ ಲಸ್ರಾದೋ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಈತ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿದ್ದು, ಕೆದಿಲ ರೋಶನ್ ಮತ್ತು ಸುಶಾಂತಿ ರವರ ಪುತ್ರರಾಗಿರುತ್ತಾರೆ.

ಇವರು ಕಬಕದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು ರೋಹಿತ್ ಎಸ್‌ ಎನ್, ನಿಖಿಲ್‌ ಕೆ.ಟಿ ತರಬೇತಿ ನೀಡುತ್ತಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂತಿ ಅಗ್ನೆಸ್ ಬಿ. ಎಸ್ ಹಾಗೂ ಕ್ರೀಡಾ ಉಪನ್ಯಾಸಕ ಹರೀಶ್ ರವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here