ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂಸ್ಥೆಯ ಆವರಣದಲ್ಲಿ ನಡೆಯಿತು.
ಶರೀಅತ್ ವಿಭಾಗದ ಪ್ರಾಂಶುಪಾಲ ಮುಹಮ್ಮದ್ ಸಅದಿ ವಳವೂರು ಉಸ್ತಾದ್ ಪ್ರಾರ್ಥನೆ ಗೆ ನೇತೃತ್ವ ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ, ನಾಯಕತ್ವ ಗುಣಗಳನ್ನು ಕಾಲೇಜಿಗೆ ಮಾತ್ರ ಸೀಮಿತಗೊಳಿಸದೆ ಹೊರಗೂ ನಾಯಕರಾಗಿ ಗುರುತಿಸಿಕೊಳ್ಳಬೇಕು, ಹಾಗೂ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತಿರಬೇಕು. ಎಂದು ಅಭಿಪ್ರಾಯಪಟ್ಟರು.
2023-24 ನೇ ಶೈಕ್ಷಣಿಕ ವರ್ಷದ ನೂತನ ಕಾಲೇಜು ಅಧ್ಯಕ್ಷೆಯಾಗಿ ದ್ವಿತೀಯ ವಾಣಿಜ್ಯ ವಿಭಾಗದ ಫಾತಿಮತ್ ಝಹ್ರ, ಕಾರ್ಯದರ್ಶಿಯಾಗಿ ಆಯಿಶತ್ ಶಾಕಿರ, ಜೊತೆ ಕಾರ್ಯದರ್ಶಿಯಾಗಿ ಫಾತಿಮತ್ ಸಫ್ರೀನ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಂಶುಪಾಲೆ ಸಂಧ್ಯಾ ಪಿ ಶೆಟ್ಟಿ, ಪ್ರಮಾಣವಚನ ಬೋಧಿಸಿದರು.
ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ ಹಾಗೂ ಮರ್ಕಝುಲ್ ಹುದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಮನ್ಸೂರ್ ಮಾತನಾಡಿ ಶುಭ ಹಾರೈಸಿದರು. ದ್ವಿತೀಯ ವಿಜ್ಞಾನ ವಿಭಾಗದ ಫಾತಿಮತ್ ಸಫಾ ಕೆ.ಎ. ಲಮೀಹ ಫಾತಿಮ ಕಾರ್ಯಕ್ರಮ ನಿರೂಪಿಸಿದರು, ದ್ವಿತೀಯ ವಿಜ್ಞಾನ ವಿಭಾಗದ ಆಯಿಷಾ ತಝ್ಕಿಯ ಸ್ವಾಗತಿಸಿದರು. ನಾಫಿಯ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.